ಸೆ.24ರಂದು ಸಂಪಾಜೆ ಸಹಕಾರಿ ಸಂಘ ಹಾಗೂ ತೆಂಗು ಬೆಳೆಗಾರರ ರೈತ ಉತ್ಪಾದಕ ಕಂಪೆನಿ ಸಹಯೋಗದಲ್ಲಿ ಕಸಿಕಟ್ಟುವ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಾಗಾರ

0

ಸುಳ್ಯದ ತೆಂಗು ಬೆಳೆಗಾರರ ರೈತ ಉತ್ಪಾದಕರ ಕಂಪೆನಿ ಹಾಗೂ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಆಸಕ್ತ ಕೃಷಿಕರಿಗಾಗಿ ಸೆ.9ರಂದು ಹಮ್ಮಿಕೊಂಡಿದ್ದ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಾಗಾರವು ಸೆ.24ಕ್ಕೆ ಮುಂದೂಡಿಕೆಯಾಗಿರುವುದಾಗಿ ಸಂಪಾಜೆ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ್ ಕೊಯಿಂಗಾಜೆ ಅವರು ತಿಳಿಸಿದ್ದಾರೆ.

ಸುಳ್ಯದ ತೆಂಗು ಬೆಳೆಗಾರರ ರೈತ ಉತ್ಪಾದಕ ಕಂಪೆನಿ ಹಾಗೂ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಜಂಟಿ ಆಶ್ರಯದಲ್ಲಿ ಸಂಪನ್ಮೂಲ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಕೆ.ಪಿ. ಜಗದೀಶ್ ಕುಯಿಂತೋಡು, ಎಸ್.ಪಿ. ಲೋಕನಾಥ್ ಕಲ್ಲುಗುಂಡಿ ಅವರ ನೇತೃತ್ವದಲ್ಲಿ ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಪ್ರಾತ್ಯಕ್ಷಿಕೆ ಜರುಗಲಿದೆ.