ಸೆ.24: ಸಂಪಾಜೆ ಸಹಕಾರಿ ಸಂಘದ ವತಿಯಿಂದ ನಾಡ ಮಾವು ಮತ್ತು ಹಲಸು ಸಂರಕ್ಷಣೆ ಗಿಡಸವರುವಿಕೆ ಹಾಗೂ ಕಸಿಕಟ್ಟುವ ತರಬೇತಿ ಕಾರ್ಯಾಗಾರ

0

ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಸುಳ್ಯದ ತೋಟಗಾರಿಕಾ ಇಲಾಖೆಯ ವತಿಯಿಂದ ನಾಡ ಮಾವು, ಹಲಸು ಸಂರಕ್ಷಣೆ, ಗಿಡಸವರುವಿಕೆ ಹಾಗೂ ಕಸಿಕಟ್ಟುವಿಕೆ ತರಬೇತಿ ಕಾರ್ಯಾಗಾರವು ಸಂಪಾಜೆ ಸಹಕಾರಿ ಸಂಘದ ಸಭಾಭವನದಲ್ಲಿ ಸೆ.24ರಂದು ಜರುಗಲಿದೆ.


ಸಹಾಯಕ ತೋಟಗಾರಿಕಾ ಅಧಿಕಾರಿ ವಿಜೇತ್ ಎಸ್. ಅವರು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಲಿದ್ದು, ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸುಳ್ಯ ನಮಾಮಿ ಬಳಗದ ಜಯರಾಮ ಮುಂಡೋಳಿಮೂಲೆ, ಶ್ರೀಶಕುಮಾರ್ ಎಂ.ಎಸ್. ಉಪಸ್ಥಿತರಿರಲಿದ್ದಾರೆ.


ಸುಳ್ಯದ ಡಿ.ಆರ್.ಎಫ್.ಒ. ಚಂದ್ರು ಬಿ.ಜಿ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದು, ಶ್ಯಾಮ್ ಭಟ್ ಕಲ್ಮಡ್ಕ , ಸೆಲ್ವೆಸ್ಟರ್ ಡಿಸೋಜ ಸಂಪಾಜೆ, ಜಗದೀಶ್ ಪರಮಲೆ ಹಾಗೂ ಜಾಕಬ್ ಡಿಸೋಜ ಅವರು ಅವರು ಕಸಿಕಟ್ಟುವ ವಿಧಾನದ ಕುರಿತು ತರಬೇತಿ ‌ನೀಡಲಿದ್ದಾರೆ.