ಮುರುಳ್ಯ ಶಾಲೆಗೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪ್ರಥಮ ಸಮಗ್ರ ಪ್ರಶಸ್ತಿ

0

ಮುರುಳ್ಯ ಶಾಲೆಗೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪ್ರಥಮ ಸಮಗ್ರ ಪ್ರಶಸ್ತಿ

ಬಾಳಿಲದ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ನಡೆದ ಎಣ್ಮೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮುರುಳ್ಯದ ಸ. ಉ.ಹಿ.ಪ್ರಾ.ಶಾಲೆಗೆ ಹಿರಿಯ ಮತ್ತು ಕಿರಿಯರ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತದೆ.

ಹಿರಿಯ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ತೃಷಾ ಕೆ.ವಿ. -ಲಘು ಸಂಗೀತ – ಪ್ರಥಮ, ಭಕ್ತಿಗೀತೆ – ಪ್ರಥಮ, ಯಶ್ವಿತ್. ಕೆ.ಸಿ. – ಮಿಮಿಕ್ರಿ – ಪ್ರಥಮ, ತುಷಾರ, ಡಿ. – ಕವನ ವಾಚನ- ಪ್ರಥಮ, ಅಭಿನಯ ಗೀತೆ – ತೃತೀಯ, ನೇಹಾ.ಪಿ.ವಿ. – ಹಿಂದಿಕಂಠ ಪಾಠ – ದ್ವಿತೀಯ, ರಿತಿನ್ – ಚಿತ್ರಕಲೆ – ದ್ವಿತೀಯ, ತನ್ವಿ ಕೆ .ಸಿ . – ಕಥೆ ಹೇಳುವುದು – ದ್ವಿತೀಯ, ಮಹಮ್ಮದ್ ರಿಫಾಝ್ – ಕ್ಲೇ ಮಾಡೆಲಿಂಗ್ – ತೃತೀಯ, ನಿಶಾಂತ್ . ಡಿ.ವಿ. – ಛದ್ಮವೇಷ – ತೃತೀಯ ಬಹುಮಾನ ಪಡೆದುಕೊಂಡರೆ

ಕಿರಿಯ ವಿಭಾಗದಲ್ಲಿ ವಿಪ್ರ . ಪಿ.ಎನ್. – ಇಂಗ್ಲಿಷ್ ಕಂಠಪಾಠ – ಪ್ರಥಮ, ಶಾರ್ವಿ. ಪಿ. ಎ-ಆಶುಭಾಷಣ – ಪ್ರಥಮ, ಆತ್ಮಿ – ಚಿತ್ರಕಲೆ – ಪ್ರಥಮ, ಅಫ್ರಾ – ಅರೇಬಿಕ್ ಪಠಣ – ದ್ವಿತೀಯ, ಧನ್ವಿ – ಲಘು ಸಂಗೀತ – ದ್ವಿತೀಯ, ಲಹರಿ – ಅಭಿನಯಗೀತೆ – ದ್ವಿತೀಯ, ನಂದನ್.ಡಿ – ಕ್ಲೇ ಮಾಡೆಲಿಂಗ್ – ತೃತೀಯ ಬಹುಮಾನ ಪಡೆದುಕೊಂಡಿರುತ್ತಾರೆ.

ಸ್ಪರ್ಧೆಯಲ್ಲಿ
ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.