ಐಸ್ ಕ್ರಿಂನಲ್ಲಿ ಹಲ್ಲು ಇತ್ತೆಂಬ ವಾದ ಮಾಡಿದ ಗ್ರಾಹಕ

0

ಮಾಲಕರೊಂದಿಗೆ ಚಕಮಕಿ – ಹಲ್ಲೆ : ಪೋಲೀಸ್ ಠಾಣೆ ಮಟ್ಟಿಲೇರಿದ ಪ್ರಕರಣ

ಸುಳ್ಯ‌ ಜೂನಿಯರ್ ಕಾಲೇಜ್ ರಸ್ತೆಯಲ್ಲಿರುವ ಐಸ್ ಕ್ರೀಂ ಮತ್ತು ಜ್ಯೂಸ್ ಸೆಂಟರ್ ಗೆ ಗ್ರಾಹಕರೊಬ್ಬರು ಬಂದು ಐಸ್ ಕ್ರೀಂನಲ್ಲಿ ಹಲ್ಲು ಇತ್ತೆಂಬ ವಾದ ಮಂಡಿಸಿ, ಮಾಲಕರು ಹಾಗೂ ಗ್ರಾಹಕ ಹಾಗೂ ಸ್ಥಳೀಯರ ನಡುವೆ ಚಕಮಕಿ ನಡೆದು, ಹಲ್ಲೆ ನಡೆದ ಹಾಗೂ ಪೋಲೀಸರು ಸ್ಥಳಕ್ಕೆ ಬಂದು ಇಬ್ಬರನ್ನು ಠಾಣೆಗೆ ಕರೆದೊಯ್ದ‌ ಘಟನೆ ವರದಿಯಾಗಿದೆ.

ಸುಳ್ಯ ಕೇರ್ಪಳದಲ್ಲಿ ವಾಸವಿರುವ ‌ವ್ಯಕ್ತಿಯೊಬ್ಬರು ಜೂನಿಯರ್‌ ಕಾಲೇಜು ರಸ್ತೆಯ, ಯುವಜನ ಸಂಯುಕ್ತ ‌ಮಂಡಳಿಯ ಎದುರಿನ‌ ಐಸ್ ಕ್ರೀಂ‌ ಹಾಗೂ ಜ್ಯೂಸ್ ಸೆಂಟರ್ ಗೆ ಬಂದು ಇಲ್ಲಿಯ ಐಸ್ ಕ್ರೀಂ ನಲ್ಲಿ ಹಲ್ಲು ಇತ್ತೆಂದು ವಾದ ಮಾಡಿದರೆಂದು, ಈ ವೇಳೆ ಮಾಲಕರು ಅವರಲ್ಲಿ‌ ವಿವರ ಕೇಳಿದರೆನ್ನಲಾಗಿದೆ. ಈ ವೇಳೆ ಮಾಲಕರನ್ನು ಆ ಗ್ರಾಹಕ ದೂಡಿದಾಗ ಸ್ಥಳೀಯರೊಬ್ಬರು ತಡೆಯಲು‌ ಬಂದಾಗ ಗ್ರಾಹಕ ಅವರ ಮೇಲೆ ಹಲ್ಲೆ ನಡೆಸಿದರೆಂದೂ ಇದನ್ನು ನೋಡಿದ ಹೋಟೆಲ್ ಪಕ್ಕದಲ್ಲಿದ್ದ ಒಂದಿಬ್ಬರು‌ ಸೇರಿಕೊಂಡು ಗ್ರಾಹಕನಿಗೆ ಥಳಿಸಿದರೆನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೋಲೀಸರು ಗ್ರಾಹಕ ಹಾಗೂ ಮತ್ತೊಬ್ಬರನ್ನು ಠಾಣೆಗೆ ಕರೆದುಕೊಂಡು‌ ಹೋದರೆಂದು ತಿಳಿದುಬಂದಿದೆ.