ಜಯನಗರ ಶಾಲೆಯಲ್ಲಿ ‘ಮುಟ್ಟು ಗುಟ್ಟಲ್ಲ’ ಅರಿವು ಕಾರ್ಯಕ್ರಮ

0

ಜಯನಗರ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆ.18 ರಂದು ಮುಟ್ಟು ಗುಟ್ಟಲ್ಲ ಆರೋಗ್ಯ ಅರಿವು ಕಾರ್ಯಕ್ರಮದಡಿ ಮರುಬಳಕೆಯ ಪ್ಯಾಡ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ದೃಷ್ಟಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರು ನಗರ ಪಂಚಾಯತ್ ಸದಸ್ಯರಾಗಿರುವ ಬಾಲಕೃಷ್ಣ ಭಟ್ ಕೊಡೆಂಕಿರಿ ಇವರು ರೂ.7000 ಮೌಲ್ಯದ ಮರುಬಳಕೆಯ ಪ್ಯಾಡ್ ಗಳನ್ನು ನೀಡಿ ಸಹಕರಿಸಿದರು.

ಮಾಹಿತಿದಾರರಾಗಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಹ ಶಿಕ್ಷಕಿ ಮಮತಾ ಎಂ ಜೆ ಮರುಬಳಕೆಯ ಪ್ಯಾಡ್ ಗಳ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಮುದ್ದಪ್ಪ ಎನ್, ನಗರ ಪಂಚಾಯತ್ ಸದಸ್ಯ ಬಾಲಕೃಷ್ಣ ಭಟ್ ಕೊಡೆಂಕಿರಿ,ನಗರ ಪಂಚಾಯತ್ ನ ಕಾರ್ಯಕ್ರಮಗಳ ನೋಡಲ್ ಆಗಿರುವ ಶ್ರೀಮತಿ ಜಯಲಕ್ಷ್ಮಿ, ಸರಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ,ಸುಳ್ಯ ಸಮುದಾಯ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿಯಾದ ಕ್ರಿಸ್ಟಲ್, ಸಮೂಹ ಸಂಪನ್ಮೂಲ ವ್ಯಕ್ತಿಯಾದ ಮಮತಾ ಕೆ, ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ವೀಣಾ ಕೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಸದಸ್ಯರು,ಪೋಷಕರು, ವಿದ್ಯಾರ್ಥಿಗಳು,ಶಿಕ್ಷಕ ವೃಂದದವರು ಭಾಗವಹಿಸಿದರು.
ಮುಖ್ಯ ಶಿಕ್ಷಕರಾದ ಶ್ರೀಮತಿ ವೀಣಾ ಕೆ ಸ್ವಾಗತಿಸಿ, ಶಿಕ್ಷಕಿಯರಾದ ಭಾರತಿ ಎಂ ವಂದಿಸಿ ಮಮತಾ ಎಸ್ ಕೆ ಕಾರ್ಯಕ್ರಮ ನಿರೂಪಿಸಿದರು.