ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಟೆ ಮುಂಡುಗಾರು ವತಿಯಿಂದ ಸೆ.19 ರಂದು ಕೋಟೆಮುಂಡುಗಾರು ಶಾಲಾ ವಠಾರದಲ್ಲಿ 32 ನೇ ವರ್ಷದ ಶ್ರೀ ಗಣೇಶೋತ್ಸವ ನಡೆಯುತಿದ್ದು ಬೆಳಗ್ಗೆ ಗಣಪತಿ ದೇವರ ಮೂರ್ತಿ ಪ್ರತಿಷ್ಠಾಪಿಸಲಾಯಿತು
ಬಳಿಕ ಶ್ರೀ ಮಂಜುನಾಥ ಭಜನಾ ಮಂಡಳಿ ಕೋಟೆಮುಂಡುಗಾರು ಇವರಿಂದ ಭಜನೆ ನಡೆಯಿತು. ಗಣಪತಿ ಹವನ, ಮಕ್ಕಳ ಅಕ್ಷರಾಭ್ಯಾಸ ನಡೆದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆದು, ಸ್ಪರ್ಧೆಗಳು ನಡೆದು ಬಹುಮಾನ ವಿತರಣೆ ನಡೆಯಲಿದೆ, ಮಧ್ಯಾಹ್ನ ಪ್ರಸಾದ ಭೋಜನ ನಡೆದು. ಅಪರಾಹ್ನ ಗಂಟೆ ಯುವಕ ಮಂಡಲ ಕಳಂಜ ಮತ್ತು ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಸಹಯೋಗದಲ್ಲಿ ತರಬೇತಿ ಪಡೆದ ಮಕ್ಕಳ ತಂಡದಿಂದ ” ಶೂರ್ಪನಖಾ ಮಾನಭಂಗಾ – ಖರಾಸುರ ವಧೆ” ಯಕ್ಷಗಾನ ನಡೆಯಲಿದೆ, ಬಳಿಕ ಯುವಕ ಮಂಡಲ ಕಳಂಜ ಇದರ ಹವ್ಯಾಸಿ ಕಲಾವಿದರಿಂದ “ಇಂದ್ರಜಿತು ಕಾಳಗ” ಯಕ್ಷಗಾನ ಪ್ರದರ್ಶನ ನಡೆಯಲಿದೆ. ಬಳಿಕ ಸಂಜೆ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಗಂಟೆ 7.00 ರಿಂದ ಕೋಟೆಮುಂಡುಗಾರಿನಿಂದ ಶೋಭಾಯಾತ್ರೆ ರಸ್ತೆಯಲ್ಲಿ ಸಾಗಿ ಅಯ್ಯನಕಟ್ಟೆ ಹೊಳೆಯಲ್ಲಿ ಮೂರ್ತಿವಿಸರ್ಜನೆ ನಡೆಯಲಿದೆ.