ಕೊಡಿಯಾಲಬೈಲು ಶಾಲಾ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ಹಾಗೂ ಇನ್ನಿತರ ಪರಿಕರಗಳ ವಿತರಣೆ

0

ಕೊಡಿಯಾಲ ಬೈಲು ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ದಾನಿಗಳ ಸಹಕಾರದಿಂದ ನೀಡಿದ ಐಡಿ ಕಾರ್ಡ್ ಮತ್ತು ಇನ್ನಿತರ ಪರಿಕರಗಳ ವಿತರಣಾ ಕಾರ್ಯಕ್ರಮ ಸೆ 18 ರಂದು ನಡೆಯಿತು.

ಐಡಿ ಕಾರ್ಡಿನ ದಾನಿಗಳಾಗಿ ಸುಳ್ಯ ಶಿಕ್ಷಣಾಧಿಕಾರಿಗಳ ಕಛೇರಿಯ ಪ್ರಥಮ ದರ್ಜೆ ಸಹಾಯಕರಾದ ಕೆ ವಿ ಶಿವಪ್ರಸಾದ್ 2023/2024ನೇ ಸಾಲಿನ 4%ತುಟ್ಟಿ ಭತ್ಯೆ ಹೆಚ್ಚಳದ ಮೊತ್ತವನ್ನು ಬಳಸಿ ನೀಡಿ ಸಹಕರಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ವಾರ್ಡ್ ಸದಸ್ಯ ಹರೀಶ್ ರೈ,ಶ್ರೀಮತಿ ಮಮತಾ ಕುತ್ಪಾಜೆ, ಹಾಗೂ ಶಾಲಾ ಎಸ್‌ಡಿಎಂಸಿ ಅದ್ಯಕ್ಷೆ ಶ್ರೀಮತಿ ಚಂದ್ರಕಲಾ ಸ್ಮರಣಿಕೆ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರು ಪೋಷಕರು,ಎಸ್ ಡಿ ಎಂ ಸಿ ಸದಸ್ಯರು,ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ಅಕ್ಷರದಾಸೋಹ ಸಿಬ್ಬಂದಿಗಳು ಉಪಸ್ಥಿತರಿದ್ದು ಸಹಕರಿಸಿದರು.

ಅಲ್ಲದೆ ಈ ಸಂದರ್ಭದಲ್ಲಿ 2023/2024ನೆ ಸಾಲಿನ ಇಲಾಖೆಯಿಂದ ಕೊಡಮಾಡುವ ಉಚಿತ ಚಪ್ಪಲಿಯನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಭಾರತ್ ಪ್ರತಿಷ್ಟಾನ ಬೆಂಗಳೂರು ವತಿಯಿಂದ ವಿದ್ಯಾರ್ಥಿಗಳಿಗೆ ನೀಡಿದ ಬರವಣಿಗೆ ಪುಸ್ತಕಗಳನ್ನು ಹಮೀದ್ ಚಾಯ್ಸ್ ವಿದ್ಯಾರ್ಥಿಗಳಿಗೆ ವಿತರಿಸಿದರು.

ಈ ಕಾರ್ಯಕ್ರಮದಲ್ಲಿ ಪ್ರತಿಭಾ ಕಾರಂಜಿಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಾದ ಮುಹಮ್ಮದ್ ತಹಝೀಮ್ ಮತ್ತು ಅನುಶ್ರೀ ಯವರನ್ನು ಗೌರವಿಸಲಾಯಿತು.

ಸ್ಥಳೀಯ ಸಂಘ ಸಂಸ್ಥೆಗಳಾದ ಶ್ರೀವಿಷ್ಣು ಯುವಕಮಂಡಲ,ವರಲಕ್ಷ್ಮೀ ಯುವತಿ ಮಂಡಲ,ಮಹಮಾಹಿ ಸಮಿತಿ ಕೊಡಿಯಾಲಬೈಲು,ಹಳೇ ವಿದ್ಯಾರ್ಥಿ ಸಂಘ,ಒತ್ತೇಕೋಲ ಸಮಿತಿ,ಗ್ರಾಮ ಪಂಚಾಯತ್ ಸದಸ್ಯರು,ಎಸ್ ಡಿ ಎಂ ಸಿ ಮತ್ತು ಪೋಷಕರು ಶಿಕ್ಷಕರು,ಅಕ್ಷರದಾಸೋಹ ಸಿಬ್ಬಂದಿಗಳು,ಅಂಗನವಾಡಿ ಕಾರ್ಯಕರ್ತೆ,ಸಹಾಯಕಿ,ಹಾಗೂ ಊರಿನ ದಾನಿಗಳ ಸಹಕಾರದಿಂದ ಸುಮಾರು 54 ಸಾವಿರ ವೆಚ್ಚದಲ್ಲಿ ರಂಗಮಂದಿರದ ಎದುರು ಶೀಟ್ ಅಳವಡಿಸಿ ಶಾಲೆಯ ಶ್ರೇಯೋ ಭಿವೃದ್ದಿಗೆ ಧನಸಹಾಯ ನೀಡಿ ಸಹಕರಿಸಿದ ಎಲ್ಲ ದಾನಿಗಳು ಮತ್ತು ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ ತಿಲಕ್ ಮತ್ತು ಸದಸ್ಯರು ಭಗವತಿ ಹಾರ್ಡವೇರ್ ಸಂಸ್ಥೆಯ ಮಾಲಕರಿಗೆ ಧನ್ಯವಾದವನ್ನು ಸಲ್ಲಿಸಲಾಯಿತು.