ಸುಬ್ರಹ್ಮಣ್ಯ ಹಾಲು ಉತ್ಪಾದಕ ಮಹಿಳಾ ಸಹಕಾರಿ ಸಂಘದ 2020 – 23ನೇ ಸಾಲಿನ ವಾರ್ಷಿಕ ಸಭೆಯು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸೆ.18 ರಂದು ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷ ಶೋಭಾ ನಲ್ಲೂರಾಯ ವಹಿಸಿದ್ದರು. ಪ್ರಸಕ್ತ ವರ್ಷ ಮಹಿಳಾ ಸಹಕಾರಿ ಸಂಘಕ್ಕೆ ರೂ. 202606.17/= ಲಾಭಾಂಶ ಬಂದಿದ್ದು ಪ್ರತಿ ಲೀಟರ್ ಗೆ ರೂ 1.32 ರಂತೆ ಬೋನಸ್ ಘೋಷಣೆ ಮಾಡಲಾಯಿತು.
ಅದಲ್ಲದೆ ಸಂಘದ ಪ್ರತಿ ಸದಸ್ಯರಿಗೆ ಶೇ.10 ಡಿವಿಡೆಂಟನ್ನು ಕೂಡ ನೀಡುವುವೆಂದು ಘೋಷಣೆ ಮಾಡಲಾಯಿತು. ಸಂಘಕ್ಕೆ ಹಾಲು ಹಾಕುವ ಸದಸ್ಯರುಗಳ ಮಕ್ಕಳಿಗೆ ಎಸ್. ಎಸ್. ಎಲ್. ಸಿ./ ಪಿ.ಯು.ಸಿ.ಯಲ್ಲಿ ಅತ್ಯಧಿಕ ಅಂಕ ಗಳಿಸಿದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ವೇದಿಕೆಯಲ್ಲಿದ್ದ ವಿಸ್ತರಣಾಧಿಕಾರಿ ಹರೀಶ್ ಕುಮಾರ್ ಸದಸ್ಯರುಗಳಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಹಶುದ್ಧ ಹಾಲು ಉತ್ಪಾದನೆ, ಪಶು ಸಾಕಾಣಿಕೆ, ಸಮಸ್ಯೆಗಳ ಬಗ್ಗೆ ತಿಳಿಸಿದರು .
ಕಾರ್ಯದರ್ಶಿ ಪುಷ್ಪ ವರದಿ ಹಾಗೂ ಲೆಕ್ಕಪರಿಶೋಧನಾ ವರದಿಯನ್ನು ನೀಡಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಪ್ರೇಮ ಎನ್ ಬಿ, ಹಾಗೂ ನಿರ್ದೇಶಕರುಗಳಾದ ಲಲಿತ, ಸುಮಿತ್ರ , ಅಮಣ್ಣಿ ,ಕಮಲ, ಲತಾ ಪಿ, ಲಲಿತ ಎನ್ ,ಭವ್ಯ ,ಹರಿಣಾಕ್ಷಿ, ಸೀತಮ್ಮ ಉಪಸ್ಥಿತರಿದ್ದರು. ಸವಿತಾ ಭಟ್ ಪ್ರಾರ್ಥಿಸಿದರು. ಶೋಭಾ ನಲ್ಲೂರಾಯ ಸ್ವಾಗತಿಸಿದರು, ಹೇಮಾವತಿ ಧನ್ಯವಾದ ಸಮರ್ಪಿಸಿದರು.