ಗಣಪತಿ ಪ್ರತಿಷ್ಟೆ, ಭಜನೆ, ಸಂಜೆ ನೃತ್ಯ ಸಂಗಮ, ಸಭಾ ಕಾರ್ಯಕ್ರಮ
ಶ್ರೀ ನರಸಿಂಹ ಶಾಸ್ತಾವು ದೇವಾಲಯ, ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಬರಡ್ಕ ಮಿತ್ತೂರು ಇದರ ಆಶ್ರಯದಲ್ಲಿ 13 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಇಂದಿನಿಂದ ಆರಂಭಗೊಂಡು ಸೆ. 20 ರವರೆಗೆ ನರಸಿಂಹ ಶಾಸ್ತಾವು ದೇವಾಲಯದಲ್ಲಿ ನಡೆಯಲಿದೆ.
ಇಂದು ಬೆಳಿಗ್ಗೆ ಸ್ಥಳ ಶುದ್ಧಿ, ಗಣಪತಿ ಪ್ರತಿಷ್ಟೆ ನಡೆಯಿತು ನಂತರ ಭಜನೆ, ಮದ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಹಾಗೂ ಬೆಳಿಗ್ಗೆ ದೇವಾಲಯದಲ್ಲಿ ಸಾರ್ವಜನಿಕ ಗಣಪತಿ ಹೋಮ ನಡೆಯಲಿದೆ.
ಅಪರಾಹ್ನ 2.30 ರಿಂದ ಭಜನೆ, ರಾತ್ರಿ 6.00 ರಿಂದ ಊರಿನ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಗಾನ ನೃತ್ಯ ಅಕಾಡೆಮಿ ಸುಳ್ಯ ಹಾಗೂ ಮಂಗಳೂರಿನ ಕಲಾವಿದೆಯರಿಂದ ರಾತ್ರಿ ಗಂಟೆ 7.00 ರಿಂದ ನೃತ್ಯ ಸಂಗಮ
ನಂತರ ಭಜನಾ ಕಾರ್ಯಕ್ರಮ, ರಾತ್ರಿ 8.30 ರಿಂದ ಸಭಾ ಕಾರ್ಯಕ್ರಮ, ನಂತರ ಊರವರಿಂದ ವಿವಿಧ ಕಾರ್ಯಕ್ರಮ ನಡೆಯಲಿದೆ.