ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ, ರಜತ‌ ಸಂಭ್ರಮ

0

ಇಂದು ವೈಭವದ ಶೋಭಾಯಾತ್ರೆ- ಜಲಸ್ತಂಭನ

ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ -ರಜತ ಸಂಭ್ರಮದ ಅಂಗವಾಗಿ ಇಂದು (ಸೆ.21 ರಂದು) ವೈಭವದ ಶೋಭಾಯಾತ್ರೆ ಜಲಸ್ತಂಭನ ನಡೆಯಲಿದೆ.


ಸೆ. 21ರಂದು ಪೂರ್ವಾಹ್ನ ಗಂಟೆ 8ದ ಬೆಳಗಿನ ಪೂಜೆ, ನಾಗತೀರ್ಥ ಪಂಚಲಿಂಗೇಶ್ವರ ಭಜನಾ ಮಂಡಳಿ , ಓಂಕಾರ ಭಜನಾ ಮಂಡಳಿ ಎಣ್ಮೂರು ವತಿಯಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಜರುಗಲಿದೆ.


ಸಂಜೆ ಗಂಟೆ 3ರಿಂದ ವೈಭವದ ಶೋಭಾಯಾತ್ರೆಯು ದೇಗುಲದ ವಠಾರದಿಂದ ಪಂಜ ಪೇಟೆಯ ಮೂಲಕ ಮುಖ್ಯರಸ್ತೆಯಲ್ಲಿ ಸಾಗಿ ಪಂಜ ಹೊಳೆಯ ನಾಗತೀರ್ಥ ಸಂಗಮದಲ್ಲಿ ಜಲಸ್ತಂಭನ ಜರುಗಲಿದೆ. ಶೋಭಾಯಾತ್ರೆಯಲ್ಲಿ
ತುಳುನಾಡಿನ ಹೆಮ್ಮೆಯ ಹುಲಿ ವೇಷ, ಕೀಲು ಕುದುರೆ , ಭಜನೆ,ಕುಣಿತ ಭಜನೆ
ಮೊದಲಾದ ತಂಡಗಳು ಪಾಲ್ಗೊಳ್ಳಲಿವೆ.