ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಗನವಾಡಿ ಕೇಂದ್ರ ಶಾಂತಿನಗರ ಮತ್ತು ದೀಪಾಂಜಲಿ ಮಹಿಳಾ ಮಂಡಲ ಇದರ ಜಂಟಿ ಆಶ್ರಯದಲ್ಲಿ ಶಾಂತಿನಗರ ಅಂಗನವಾಡಿ ಕೇಂದ್ರದಲ್ಲಿ ಪೋಷಣಾ ಮಾಸಚರಣೆ ಆಚರಿಸಲಾಯಿತು.
ನಿವೃತ್ತ ಶುಶ್ರೂಷಾಧಿಕಾರಿ ಶ್ರೀಮತಿ ದೇವಕಿ ಸಮತೋಲನ ಆಹಾರದ ಬಗ್ಗೆ ಮಾಹಿತಿ ನೀಡಿದರು.
ನಿಫಾ ವೈರಸ್ ಬಗ್ಗೆ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಶಶಿಕಲಾ ಮಾಹಿತಿ ನೀಡಿದರು.
ಸಮುದಾಯ ಆರೋಗ್ಯ ಅಧಿಕಾರಿ ಶ್ರೀಮತಿ ತೇಜಶ್ರೀ ಉಪಸ್ಥಿತರಿದ್ದರು. ಪೌಷ್ಟಿಕಾಂಶಯುಕ್ತ ಆಹಾರದ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನವನ್ನು ವಿತರಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಇಂದಿರಾ ಪ್ರಾರ್ಥಿಸಿದರು.
ದೀಪಾಂಜಲಿ ಮಹಿಳಾ ಮಂಡಲದ ಅಧ್ಯಕ್ಷ ಶ್ರೀಮತಿ ಲಲಿತಾ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಮಕ್ಕಳು ,ಅಂಗನವಾಡಿ ಸಹಾಯಕಿಯರು , ಪೋಷಕರು,ಗರ್ಭಿಣಿ ಬಾಣಂತಿಯರು ಉಪಸ್ಥಿತರಿದ್ದರು.