ಚೆಂಬು: ದಬ್ಬಡ್ಕದಲ್ಲಿ ಆನೆ ದಾಳಿ ಕೃಷಿ ನಾಶ

0

ಕೆ.ಪಿ.ಸಿ.ಸಿ‌. ವಕ್ತಾರ ಸಂಕೇತ್ ಪೂವಯ್ಯ ಭೇಟಿ – ಕೃಷಿಕರೊಂದಿಗೆ ಸಮಾಲೋಚನೆ

ಚೆಂಬು ಗ್ರಾಮದ ಡಬ್ಬಡ್ಕ ಭಾಗದಲ್ಲಿ ಸತತವಾಗಿ ಆನೆ ದಾಳಿಯಿಂದಾಗಿ ಸೆ.19 ಹಾಗೂ 20ರಂದು ಹೊಸೂರು ಪಳಂಗಪ್ಪ, ಕೊಪ್ಪದ ಶಿವರಾಮ, ಕಿರ್ಲಾಯ ನಾಗೇಶ ಅವರ ಕೃಷಿ ತೋಟ ಹಾಗೂ ಗದ್ದೆಗಳಿಗೆ ಹಾನಿಯಾಗಿದ್ದು,
ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣನವರ ನಿರ್ದೇಶನದಂತೆ ಕೆ.ಪಿ.ಸಿ.ಸಿ. ರಾಜ್ಯ ವಕ್ತಾರ ಸಂಕೇತ್ ಪೂವಯ್ಯರವರು ಸೆ.21ರಂದು ಭೇಟಿ ನೀಡಿ ಕೃಷಿಕರೊಂದಿಗೆ ಸಮಾಲೋಚಿಸಿದರು.

ಚೆಂಬು ಗ್ರಾಮದ ದಬ್ಬಡ್ಕ ಪರಿಸರದಲ್ಲಿ ಕೃಷಿಕರ ತೋಟ ಹಾಗೂ ಗದ್ದೆಗಳಿಗೆ ನಿರಂತರವಾಗಿ ನಡೆಸುತ್ತಿದ್ದು, ಈ ಭಾಗದ ಕೃಷಿಕರು ಕಂಗಾಲಾಗಿದ್ದಾರೆ. ಕೃಷಿಕರ ಅಡಿಕೆ ತೋಟ, ಗದ್ದೆಗೆ ದಾಳಿ ನಡೆಸುತ್ತಿದ್ದು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಸ್ಥಳೀಯ ಅರಣ್ಯಾಧಿಕಾರಿಗಳನ್ನು ಕರೆಸಿಕೊಂಡು ಅವರಿಂದ ವಿವರಣೆ ಪಡೆದ ಸಂಕೇತ್ ಪೂವಯ್ಯರವರು ಶಾಸಕರ ನಿರ್ದೇಶನದಂತೆ ಕೂಡಲೇ ಸ್ಥಳ ಪರೀಶೀಲನೆ ಮಾಡಿ ಸೂಕ್ತಪರಿಹಾರವನ್ನು ನೀಡಬೇಕೆಂದು ತಿಳಿಸಿದರು.

ದಬ್ಬಡ್ಕ ಭಾಗದಲ್ಲಿ ಕಳೆದ 20 ವರ್ಷದಿಂದಲೂ ಕೃಷಿಕರ ತೋಟ, ಗದ್ದೆಗಳಿಗೆ ಆನೆ ಹಾವಳಿ ಇದ್ದು, ಈವರೆಗೆ ಯಾವುದೇ ಪರಿಹಾರ, ಅಧಿಕಾರಿಗಳು, ಪೂರಕವಾಗಿ ಸ್ಪಂದಿಸುತ್ತಿರಲಿಲ್ಲ ಹಾಗೂ ಅರಣ್ಯ ಇಲಾಖೆಯಿಂದ ಕೂಡ ಸೂಕ್ತ ರೀತಿಯಲ್ಲಿ ಪರಿಹಾರ ದೊರಕುತ್ತಿರಲಿಲ್ಲ ಎಂದು ದೂರಿಕೊಂಡರು.

ಶಾಸಕ ಎ.ಎಸ್ ಪೊನ್ನಣ್ಣ ರವರು ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಕೂಡಲೇ ಬೆಳೆ ಹಾನಿ ನಷ್ಟಕ್ಕೆ ಅಗತ್ಯ ಪರಿಹಾರವನ್ನು ವಿತರಿಸುವಂತೆ ಸೂಚಿಸಿದರಲ್ಲದೆ ಆನೆ ದಾಳಿ ತಡೆಗೆ ಬೇಕಾದಂತಹ ಎಲ್ಲಾ ಅಗತ್ಯ ಕ್ರಮಗಳನ್ನು ಕೂಡಲೇ ಕೈಗೊಳ್ಳುವಂತೆ ಕಟ್ಟುನಿಟ್ಟಾಗಿ ಆದೇಶಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು, ಕೊಡಗು ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಪಿ.ಎಲ್. ಜಿಲ್ಲಾ ಸಾಮಾಜಿಕ ಜಾಲತಾಣ ಅಧ್ಯಕ್ಷ ಸೂರಜ್ ಹೊಸೂರು, ಗ್ರಾಮ ಪಂಚಾಯತ್ ಸದಸ್ಯರುಗಳಾದ ಆದಮ್, ಗಿರೀಶ್ ಹೊಸೂರು, ಶ್ರೀಮತಿ ಕುಸುಮ ಯೋಗೀಶ್ವರ್, ಹಿರಿಯರಾದ ಜಿ.ವಿ.
ಗಣಪಯ್ಯ, ಸೋಮಣ್ಣ ಬಾಲಂಬಿ, ತಿರುಮಲ ಸೋನ, ವಾಸು ಪೂಜಾರಿ, ಹನೀಫ್ ಸಂಪಾಜೆ, ಭುವನೇಶ್ವರ ಕೊಪ್ಪದ, ರಘುನಾಥ್ ಬಾಲಂಬಿ, ಸ್ಥಳೀಯರಾದ ಗಿರೀಶ್ ಕೆದಂಬಾಡಿ, ದಿನಕರ ಗುಂಡಿಯ, ನಾಗೇಶ ಕಿರ್ಲಾಯ ಮತ್ತಿತರರು ಉಪಸ್ಥಿತರಿದ್ದರು.