ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಏನೇಕಲ್ ಒಕ್ಕೂಟದ ವತಿಯಿಂದ ರೈತ ಕೃಷಿ ಪಾಠ ಶಾಲೆ ( ಕೃಷಿ ಮಾಹಿತಿ)ಕಾರ್ಯಕ್ರಮವು ಪ್ರಗತಿ ಪರ ಕೃಷಿಕರಾದ ದುರ್ಗಾಪ್ರಸಾದ್ ಪರಮಲೆ ಮನೆಯಲ್ಲಿ ಸೆ.22 ರಂದು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಗತಿ ಪರ ಕೃಷಿಕರಾದ ತಿಮ್ಮಯ್ಯ ಗೌಡ ಪರಮಲೆ ಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ತಾಲೂಕಿನ ಕೃಷಿ ಮೇಲ್ವಿಚಾರಕರಾದ ರಮೇಶ್ ರವರು ಪ್ರಸ್ತಾವಿಕ ಮಾತುಗಳನ್ನಾಡಿದರು. ಸಂಪನ್ಮೂಲ ವ್ಯಕ್ತಿಯಾದ ಜಗದೀಶ್ ಪರಮಲೆ ಯವರು ನರ್ಸರಿ ರಚನೆ ಯ ಬಗ್ಗೆ ಮಾಹಿತಿ ನೀಡಿದರು. ವಲಯದ ಮೇಲ್ವಿಚಾರಕರಾದ ಕಲಾವತಿ ಪಿ.ಬಿ, ಒಕ್ಕೂಟದ ಅಧ್ಯಕ್ಷರುಗಳಾದ ಲಕ್ಷ್ಮಣ ಗೌಡ ಸಂಕಡ್ಕ , ವಿಶ್ವನಾಥ ಪೂಜಾರಿಮನೆ , ಸುಬ್ರಮಣ್ಯ ಗ್ರಾಮ ಪಂಚಾಯತ್ ಸದಸ್ಯರಾದ ಶಿವರಾಮ್ ನೆಕ್ರಾಜೆ, ಸಿ. ಎಸ್. ಸಿ. ಸೇವಾದಾರರು ಸಹನಾ. ಬಿ, ಒಕ್ಕೂಟ ದ ನಿಕಟ ಪೂರ್ವ ಅಧ್ಯಕ್ಷರು, ಒಕ್ಕೂಟದ ಪದಾಧಿಕಾರಿಗಳು,ಹಾಗೂ ಸಂಘದ ಸದಸ್ಯರು ಹಾಗೂ ಊರಿನವರು ಉಪಸ್ಥಿತರಿದ್ದರು. ಸಂಘದ ಸದಸ್ಯರಾದ ಶ್ರೀಮತಿ ಹರ್ಷಿತ ಸ್ವಾಗತಿಸಿ, ಶ್ರೀಮತಿ ಯಮುನಾ ಸಂಕಡ್ಕ ರವರು ಧನ್ಯವಾದ ಮಾಡಿದರು. ಸೇವಾಪ್ರತಿನಿಧಿಯಾದ ಶ್ರೀಮತಿ ತಾರಾ ಕಾರ್ಯಕ್ರಮ ನಿರೂಪಿಸಿದರು.