ಪೆರುವಾಜೆ : ಡಾ. ಶಿವರಾಮ ಕಾರಂತ ಸರ್ಕಾರಿ ಪ್ರ.ದರ್ಜೆ ಕಾಲೇಜು ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕೆಸರ್ಡ್ ಒಂಜಿ ದಿನ ಕ್ರೀಡಾಕೂಟ

0

ಕಿಕ್ಕಿರಿದು ನೆರೆದಿದ್ದ ಕ್ರೀಡಾಭಿಮಾನಿಗಳು – ಗಮನ ಸೆಳೆದ ಕಂಬಳ

ಪೆರುವಾಜೆ ಡಾ.ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ವಿವಿಧ ಸಂಘ -ಸಂಸ್ಥೆಗಳ ಸಹಕಾರದೊಂದಿಗೆ ಪೇರಜ್ಜ ರಮೇಶ್ ಶೆಟ್ಟಿ ಸ್ಮರಣಾರ್ಥ ಪೇರಜ್ಜ ಗದ್ದೆಯಲ್ಲಿ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮವು ಸೆ.24ರಂದು ನಡೆಯಿತು. ಸಂಜೆ ವೇಳೆಗೆ ನಡೆದ ಕಂಬಳವು ಕಿಕ್ಕಿರಿದು ನೆರೆದಿದ್ದ ಕ್ರೀಡಾಭಿಮಾನಿಗಳ ಗಮನ ಸೆಳೆಯಿತು.

ಕಾರ್ಯಕ್ರಮವನ್ನು ಶಾಸಕಿ ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಿ, ಶುಭಹಾರೈಸಿದರು‌.
ಡಾ.ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ದಾಮೋದರ ಕಣಜಾಲು ಅವರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಎಸ್. ಅಂಗಾರರು ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು. ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಬೆಳ್ಳಾರೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಶ್ರೀರಾಮ ಪಾಟಾಜೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ ಬೋಜರಾಜ ಶೆಟ್ಟಿ, ಪೆರುವಾಜೆ ಭಾವೈಕ್ಯ ಯುವಕ ಮಂಡಲದ ಅಧ್ಯಕ್ಷ ಪುರುಷೋತ್ತಮ ಮಠತ್ತಡ್ಕ, ಅಭಿಷೇಕ್ ಶೆಟ್ಟಿ ಪೇರಜ್ಜ ಮನೆ, ಉದ್ಯಮಿ ಮಿಥುನ್ ಶೆಣೈ , ಬೆಳ್ಳಾರೆ ಜೇಸಿ ಅಧ್ಯಕ್ಷ ರವೀಂದ್ರನಾಥ ಶೆಟ್ಟಿ, ಬೆಳ್ಳಾರೆ ರೋಟರಿ ಕ್ಲಬ್ ಟೌನ್ ಅಧ್ಯಕ್ಷ ಶಶಿಕುಮಾರ್ ಮೊದಲಾದವರಿದ್ದರು. ಧನ್ಯಶ್ರೀ ಮತ್ತು ತಂಡ ಪ್ರಾರ್ಥಿಸಿದರು. ಪೆರುವಾಜೆ ಡಾ.ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಮಚಂದ್ರ ಸ್ವಾಗತಿಸಿ, ಪ್ರದೀಪ್ ಕುಮಾರ್ ರೈ ಪನ್ನೆ ನಿರೂಪಿಸಿದರು.

ಕ್ರೀಡಾಕೂಟದಲ್ಲಿ ಪುರುಷರಿಗೆ ಹಗ್ಗಜಗ್ಗಾಟ, ವಾಲಿಬಾಲ್, ಹಿಮ್ಮುಖ ಓಟ, ಗೂಟ ಓಟ, ಹಾಳೆ ಎಳೆಯುವ ಸ್ಪರ್ಧೆ, ಟಪ್ಪಂಗಾಯಿ, ರಿಲೇ ಓಟದ ಸ್ಪರ್ಧೆ, ಓಟದ ಸ್ಪರ್ಧೆಗಳು, ಮಡಿಕೆ ಒಡೆಯುವ ಸ್ಪರ್ಧೆ ಜರುಗಿತು. ಮಹಿಳೆಯರಿಗೆ ವಿಭಾಗದಲ್ಲಿ ಹಗ್ಗಜಗ್ಗಾಟ, ತ್ರೋಬಾಲ್, ಹಿಮ್ಮುಖ ಓಟ, ಗೂಟ ಓಟ, ಹಾಳೆ ಎಳೆಯುವ ಸ್ಪರ್ಧೆ, ಸಂಗೀತ ಕುರ್ಚಿ, ರಿಲೇ ಓಟದ ಸ್ಪರ್ಧೆ, ಓಟದ ಸ್ಪರ್ಧೆಗಳು, ಮಡಿಕೆ ಒಡೆಯುವ ಸ್ಪರ್ಧೆಗಳು ನಡೆಯಿತು. ಶಾಲಾ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಪ್ರಸಾದ್ ಕಾಟೂರು ನಿರ್ವಹಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ
ಜಾನಪದ ಕ್ರೀಡೆ ಕಂಬಳದ ಹೆಗ್ಗುರುತನ್ನು 100 ವರ್ಷದ ಹಿಂದೆಯೇ ಮೂಡಿಸಿರುವ ಪೆರುವಾಜೆ ಗ್ರಾಮದಲ್ಲಿ ಕೆಸರುಗದ್ದೆ ಸ್ಪರ್ಧೆಯಲ್ಲಿ ಕಂಬಳದ ಓಟ ಮತ್ತೊಮ್ಮೆ ನೋಡುಗರ ಕಣ್ಮನ ತಣಿಸಿತ್ತು. ವಿವಿಧ ವಿಭಾಗದ ಸ್ಪರ್ಧೆಗಳಲ್ಲಿ ಕಂಬಳದ ಕೋಣಗಳು ಭಾಗವಹಿಸಿತ್ತು. ಬ್ಯಾಂಡ್ ವಾದನದ ಸದ್ದಿನೊಂದಿಗೆ ಕಂಬಳದ ಕೋಣಗಳು ಕೆರೆಗಿಳಿದು ಪೆರುವಾಜೆಯ ಗತ ಕಾಲದ ಇತಿಹಾಸವನ್ನು ನೆನೆಪಿಸಿತ್ತು. ಪ್ರೀತಂ ರೈ ಪೆರುವಾಜೆ ಅವರು ಕಂಬಳ ಓಟ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಊರ ಪರವೂರಿನಿಂದ ಆಗಮಿಸಿದ ಕ್ರೀಡಾಭಿಮಾನಿಗಳು ಇಡೀ ಗದ್ದೆಯ ಪರಿಸರದಲ್ಲಿ ನೆರೆದಿದ್ದು, ಹಬ್ಬದ ವಾತಾವರಣ ಮನೆ ಮಾಡಿತ್ತು. ಕಾಲೇಜಿನ ಉಪಾನ್ಯಾಸಕ ವೃಂದ, ಹರ್ಷಿತ್ ಪೆರುವಾಜೆ ನೇತೃತ್ವದ ವಿದ್ಯಾರ್ಥಿಗಳ ತಂಡ ಕ್ರೀಡಾಕೂಟದ ಯಶಸ್ಸಿನ ನೇತೃತ್ವ ವಹಿಸಿತ್ತು.
ಪೆರುವಾಜೆ ಭಾವೈಕ್ಯ ಯುವಕ ಮಂಡಲ, ಗ್ರಾಮ ಪಂಚಾಯತ್, ಬೆಳ್ಳಾರೆ ಜೇಸಿಐ ಮತ್ತು ಯುವ ಜೇಸೀ ವಿಭಾಗ, ರೋಟರಿ ಕ್ಲಬ್ ಬೆಳ್ಳಾರೆ ಟೌನ್, ಲಯನ್ಸ್ ಕ್ಲಬ್ ಬೆಳ್ಳಾರೆ ಟೌನ್, ಬೆಳ್ಳಾರೆ ಸಿಎ ಬ್ಯಾಂಕ್, ಡಾ.ಶಿ.ಕಾ.ಪ್ರ.ದ.ಕಾಲೇಜು ಹಿರಿಯ ವಿದ್ಯಾರ್ಥಿ ಸಂಘ, ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ, ಬೆಳ್ಳಾರೆ ಸ್ನೇಹಿತರ ಕಲಾ ಸಂಘ, ನೆಟ್ಟಾರು ಅಕ್ಷಯ ಯುವಕ ಮಂಡಲ, ಪೆರುವಾಜೆ ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಒಕ್ಕೂಟ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನ ಸಹಯೋಗದೊಂದಿಗೆ ಕಾರ್ಯಕ್ರಮವು ಅಚ್ಚುಕಟ್ಟಾಗಿ ಮೂಡಿಬಂದಿತು.