ಇಂದು (ಸೆ. 30) ಅಂಚೆ ಸೇವೆಯಲ್ಲಿ ವ್ಯತ್ಯಯ
ಭಾರತೀಯ ಅಂಚೆ ಇಲಾಖೆಯು ಮುಂದಿನ ತಿಂಗಳ ಆರಂಭದಲ್ಲಿ ಶಾಖಾ ಅಂಚೆ ಕಚೇರಿಗಳಿಗೆ ಹೊಸ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸುತ್ತಿದ್ದು, ಇದರ ಪೂರ್ವ ತಯಾರಿಯ ಸಲುವಾಗಿ ನಿನ್ನೆ ಹಾಗೂ ಇಂದು (ಸೆ.30) ಅಂಚೆ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ದಿನಗಳಲ್ಲಿ ಹಣ ಪಾವತಿ,ಹಿಂಪಡೆಯುವಿಕೆ (Deposits and withdrawals) ಹಾಗೂ ನೋಂದಣಿ ಅಂಚೆ ಮತ್ತು ಸ್ಪೀಡ್ ಪೋಸ್ಟ್ ಬುಕ್ಕಿಂಗ್ ಸೇವೆಗಳು ಲಭ್ಯವಿರುವುದಿಲ್ಲ.
ಇದು ಶಾಖಾ ಅಂಚೆ ಕಚೇರಿಗಳಿಗೆ ಮಾತ್ರ ಅನ್ವಯವಾಗುತ್ತದೆ.
ಉಪ ಅಂಚೆ ಕಚೇರಿಗಳು ಮತ್ತು ಪ್ರಧಾನ ಅಂಚೆ ಕಚೇರಿಗಳು ಎಂದಿನಂತೆಯೇ ಕಾರ್ಯನಿರ್ವಹಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.