ಕೊಡಿಯಾಲ : ಕಾಂತಿಲ ನಿಡ್ಮಾರು ಶ್ರೀ ಉಳ್ಳಾಕುಲು ಮತ್ತು ಪರಿವಾರ ದೈವಸ್ಥಾನ

0

ಜೀರ್ಣೋದ್ಧಾರದ ಬಗ್ಗೆ ಭಕ್ತಾದಿಗಳ ಪೂರ್ವಭಾವಿ ಸಭೆ

ಪ್ರಶ್ನಾ ಚಿಂತನೆ , ಬಳಿಕ ಅಷ್ಟಮಂಗಲ ಪ್ರಶ್ನೆ ನಡೆಸಲು ನಿರ್ಧಾರ

ಕೊಡಿಯಾಲ ಗ್ರಾಮದ ಕಾಂತಿಲ – ನಿಡ್ಮಾರು ಶ್ರೀ ಉಳ್ಳಾಕುಲು ಮತ್ತು ಪರಿವಾರ ದೈವಗಳ ದೈವಸ್ಥಾನ ಜೀರ್ಣೋದ್ಧಾರದ ಬಗ್ಗೆ ಭಕ್ತಾದಿಗಳ ಪೂಋವಭಾವಿ ಸಭೆಯು ಸೆ.30 ರಂದು ನಡೆಯಿತು.
ನಾರಾಯಣ ಭಟ್ ಗುಂಡಿಗದ್ದೆಯವರು ದೈವಸ್ಥಾನದ ಎದುರು ದೀಪ ಬೆಳಗಿಸಿ ಪ್ರಾರ್ಥಿಸಿದರು.


ಪ್ರಮೋದ್ ಕುಮಾರ್ ಶೆಟ್ಟಿ ಕುಂಟುಪುಣಿಗುತ್ತು ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆ.ಕೆ.ನಾಯ್ಕ್ ಸಾಗುಮನೆ ಮತ್ತು ಊರ ಭಕ್ತಾದಿಗಳು ಉಪಸ್ಥಿತರಿದ್ದರು.


ಪ್ರಾರ್ಥನೆ ನಡೆದ ಬಳಿಕ ನಾರಾಯಣ ಭಟ್ ಗುಂಡಿಗದ್ದೆಯವರ ಅಧ್ಯಕ್ಷತೆಯಲ್ಲಿ ಸಭೆ ಪ್ರಾರಂಭವಾಯಿತು.
ರಾಜೇಶ್ ಗುಂಡಿಗದ್ದೆಯವರ ಪತ್ನಿ ಶ್ರೀಮತಿ ವಿನಯ ಯವರು ಎಲ್ಲರನ್ನು ಸ್ವಾಗತಿಸಿದರು.


ಬಳಿಕ ಪ್ರಮೋದ್ ಕುಮಾರ್ ಶೆಟ್ಟಿ ಕುಂಟುಪುಣಿಗುತ್ತುರವರು ಮಾತನಾಡಿ ಹಲವು ವರ್ಷದಿಂದ ದೈವಸ್ಥಾನದಲ್ಲಿ ಕಾರ್ಯಕ್ರಮಗಳು ನಿಂತು ಹೋಗಿದೆ ಇದರ ಇತಿಹಾಸ ನಮಗೆ ತಿಳಿದಿಲ್ಲ.


ಹಿರಿಯರು ಹೇಳಿದನ್ನು ನಾವು ಕೇಳಿದ್ದೇವೆ ಅಷ್ಟೆ.ಕುಂಟುಪುಣಿಗುತ್ತು,ಮುಂಡಕಜೆ,ಉಳ್ಳಾಕುಲು ದೈವಸ್ಥಾನದಿಂದ ಒಟ್ಟು ಮೂರು ಕಡೆಯಿಂದ ಭಂಡಾರ ಬಂದು ಕುದುರೆಮಜಲು ಎನ್ನುವ ಜಾಗದಲ್ಲಿ ದೈವಗಳ ಕೋಲ ನಡೆಯುತ್ತಿತ್ತು.ಕೋಲ ನಡೆಯುತ್ತಿರುವಾಗ ಯಾವುದೋ ಒಂದು ತಪ್ಪಿನಿಂದಾಗಿ ಕೋಲ ನಿಂತು ಹೋಯಿತು.ನಂತರದ ದಿನದಲ್ಲಿ ಯಾವುದೇ ಕೋಲ ಹಾಗೂ ಇತರ ಕಾರ್ಯಕ್ರಮಗಳಾಗಲಿ ಇಲ್ಲಿ ನಡೆಯಲಿಲ್ಲ ಎಂಬುದನ್ನು ಹಿರಿಯರು ಹೇಳಿದನ್ನು ಕೇಳಿ ನಾವು ತಿಳಿದುಕೊಂಡಿದ್ದೇವೆ ಎಂದು ಹೇಳಿದರು.
ನಂತರ ಮುಂದೆ ಯಾವ ರೀತಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಸಬಹುದು ಎಂದು ಗ್ರಾಮಸ್ಥರ ಅಭಿಪ್ರಾಯ ತಿಳಿಸಬೇಕು ಎಂದು ಹೇಳಿದರು.
ಶ್ರೀಮತಿ ವಿನಯ ಕುಮಾರಿಯವರು ಮಾತನಾಡಿ ನಾವು ಈ ಜಾಗವನ್ನು ಖರೀದಿಸಿದ ನಂತರ ನಮಗೆ ಆರ್ಥಿಕ ಸಮಸ್ಯೆ ಇದ್ದ ಕಾರಣ ದೈವಸ್ಥಾನದ ಅಭಿವೃದ್ಧಿ ಕೆಲಸಗಳನ್ನು ಮಾಡಲು ಆಗಲಿಲ್ಲ ಎಂದು ಹೇಳಿದರು.
ಎಲ್ಲರೂ ಒಟ್ಟಾಗಿ ಸೇರಿ ಅಭಿವೃದ್ಧಿ ಮಾಡುವುದಾದರೆ ನಾವು ದೈವಸ್ಥಾಕ್ಕೆ ಜಾಗ ಬಿಟ್ಟುಕೊಡುವುದಾಗಿ ಅವರು
ಹೇಳಿದರು.
ಈಶ್ವರ ಆಳ್ವ,ನವೀನ ರೈ ಕುರಿಯಾಜೆ,ಆನಂದ ಗೌಡ ಪೆರಿಯಾನ ಹಾಗೂ ಗ್ರಾಮಸ್ಥರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಕೆ.ಕೆ.ನಾಯ್ಕ್ ಪ್ರಾಸ್ತಾವಿಕ ಮಾತನಾಡಿ ,ಕಾರ್ಯಕ್ರಮ ನಿರೂಪಿಸಿದರು.