ಗ್ರಾಮೀಣಾಭಿವೃಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತಾಲ್ಲೂಕು ಪಂಚಾಯತ್ ಸುಳ್ಯ ಅರಂತೋಡು ಗ್ರಾಮ ಪಂಚಾಯತ್ ಮತ್ತು ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇವುಗಳ ಸಹಯೋಗದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಚತಾ ಹೀ ಸೇವಾ ವಿಶೇಷ ಗ್ರಾಮ ಸಭೆ ಹಾಗೂ ಯೋಧ ನಮನ ಕಾರ್ಯಕ್ರಮ ಅರಂತೋಡು ಪಂಚಾಯತ್ ಅಮೃತಾ ಸಭಾಭಾವನ ದಲ್ಲಿ ನಡೆಯಲಿದೆ.ಈ ಪ್ರಯುಕ್ತ ಯೋಧರ ಮೆರವಣಿಗೆಗೆ ಅರಂತೋಡು ಶ್ರೀ ದುರ್ಗಾ ಭಜನಾ ಮಂಡಳಿ ಅಧ್ಯಕ್ಷ ಕೆ.ಆರ್.ಪದ್ಮನಾಭ ಕುರುಂಜಿ ಚಾಲನೆ ನೀಡಿದರು .
ಈ ಸಂದರ್ಭದಲ್ಲಿ
ಅರಂತೋಡು ಗ್ರಾಮ ಪಂಚಾಯತ್ ಅದ್ಯಕ್ಷ ಕೇಶವ ಅಡ್ತಲೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಆರ್.ಗಂಗಾಧರ,ಟಿ.ಎಮ್.ಶಾಹಿದ್ ತೆಕ್ಕಿಲ್,ಅರಂತೋಡು ತೊಡಿಕಾನ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,ಗ್ರಾಮ ಪಂಚಾಯತ್ ಉಪಾಧ್ಯಕ್ಷ ಭವಾನಿ ಸಿ.ಎ,ದಯಾನಂದ ಕುರುಂಜಿ,ರಾಮಚಂದ್ರ ಕಲ್ಲಗದ್ದೆ ,
ಶಿವಾನಂದ ಕುಕ್ಕುಂಬಳ,ಭವಾನಿ ಶಂಕರ ಅಡ್ತಲೆ,ಪುರುಷೋತ್ತಮ ಅಡ್ತಲೆ,ಆಶ್ರಫ್ ಗುಂಡಿ,ಸತೀಶ್ ನಾಯ್ಕ್,ಪಂಚಾಯತ್ ಅಭಿವೃಧಿ ಅಧಿಕಾರಿ ಎಮ್.ಆರ್.ಜಯಪ್ರಕಾಶ್ ಉಪಸ್ಥಿತಿದರು.
ಸಭಾ ಕಾರ್ಯಕ್ರಮದ ಮೊದಲು ಅಡ್ಕಬಳೆ ಕಾಂಪ್ಲೆಕ್ಸ್ ಮುಂಭಾಗ ದಿಂದ ಮೆರವಣಿಗೆ ಹೊರಟು ತೊಡಿಕಾನ ದ್ವಾರದ ವರೆಗೆ ಹೋಗಿ ಪಂಚಾಯತ್ ಬಳಿ ಸಮಾಪ್ತಿಗೊಂಡಿತು.ಮೆರವಣಿಗೆ ಯಲ್ಲಿ ನಾಸಿಕ್ ಬ್ಯಾಂಡ್,ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಗಳು,ಆಶಾ ಕಾರ್ಯಕರ್ತರು,ವಾಹನ ಚಾಲಕ ಮಾಲಕರು,ಮೆರವಣಿಗೆಗೆ ಸಾಥ್ ನೀಡಿದರು.