ಭಾರತೀಯ ಅಂಚೆ ಇಲಾಖೆ ವತಿಯಿಂದ ಹೊಸ ತಂತ್ರಜ್ಞಾನ ದರ್ಪನ್ 2.0 ಅನುಷ್ಠಾನ

0

ಸುಳ್ಯ ಪ್ರಧಾನ ಅಂಚೆ ಕಚೇರಿಯಲ್ಲಿ ಅಂಚೆ ಪಾಲಕರಿಗೆ ಸ್ಮಾರ್ಟ್ ಫೋನ್ ವಿತರಣೆ

ಭಾರತೀಯ ಅಂಚೆ ಇಲಾಖೆಯು ಹೊಸ ತಂತ್ರಜ್ಞಾನ ದರ್ಪನ್ 2.0 ಅನುಷ್ಠಾನಗೊಳಿದ್ದು,ಇದರ ಸಲುವಾಗಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ವತಿಯಿಂದ ಶಾಖಾ ಕಚೇರಿಗಳಿಗೆ ಸ್ಮಾರ್ಟ್ ಫೋನ್ ವಿತರಿಸುವ ಕಾರ್ಯಕ್ರಮ ಅಕ್ಟೋಬರ್ 3 ರಂದು ಸುಳ್ಯ ಪ್ರಧಾನ ಅಂಚೆ ಕಛೇರಿಯಲ್ಲಿ ನಡೆಯಿತು.

ನೂತನ ಹೊಸ ತಂತ್ರಜ್ಞಾನದ ಬಗ್ಗೆ ಅಂಚೆ ಇಲಾಖೆಯ ಸುಳ್ಯ ಉಪ ವಿಭಾಗದ ನಿರೀಕ್ಷಣಾಧಿಕಾರಿ ಪ್ರದೀಪ್ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಸುಳ್ಯ ಕೇಂದ್ರ ಅಂಚೆ ಕಛೇರಿಯ ಪಾಲಕರಾದ ಮೋಹನ್,ಹರಿಅಡ್ಕ ಅಂಚೆ ಪಾಲಕರಾದ ಶ್ರೀಮತಿ ವಿಜಯಲಕ್ಷ್ಮಿ,ಹಾಗೂ ಹಿರಿಯ ಸಿಬ್ಬಂದಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಪ ವಿಭಾಗದ ನಿರೀಕ್ಷಣಾಧಿಕಾರಿ ಪ್ರದೀಪ್ ರವರು ಶ್ರೀಮತಿ ವಿಜಯಲಕ್ಷ್ಮಿ ರವರಿಗೆ ಪ್ರಥಮವಾಗಿ ಸ್ಮಾರ್ಟ್ ಫೋನ್ ಹಸ್ತಾಂತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸುಳ್ಯ,ಕಡಬ,ಬೆಳ್ಳಾರೆ,ಪಂಜ, ಸಂಪಾಜೆ, ಕಾವು, ಈಶ್ವರ ಮಂಗಲ, ಸುಬ್ರಹ್ಮಣ್ಯ, ಗುತ್ತಿಗಾರು,ದೊಡ್ಡ ತೋಟ,ಅರಂತೋಡು,ನೆಟ್ಟಣೆ ಅಂಚೆ ಕೇಂದ್ರಗಳ 64 ಶಾಖೆಗಳ 80ಕ್ಕೂ ಹೆಚ್ಚು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಂಚೆ ಸಿಬ್ಬಂದಿಗಳು ತಮ್ಮ ತಮ್ಮ ಕಚೇರಿಯಲ್ಲಿ ಇದ್ದ ಆರ್ ಸಿ ಟಿ ಡಿವೈಸ್ ಯಂತ್ರವನ್ನು ತಂದು ಇಲಾಖೆಗೆ ಮರಳಿಸಿ ಇಲ್ಲಿ ವಿತರಿಸಲಾದ ನೂತನ ತಂತ್ರಜ್ಞಾನ ಅಳವಡಿಸಿದ ಸ್ಮಾರ್ಟ್ ಫೋನ್ ಗಳನ್ನು ಪಡೆದುಕೊಂಡರು.