ಗುತ್ತಿಗಾರು: ಸ್ವಚ್ಛತಾ ಸಿಬ್ಬಂದಿಗಳಿಗೆ ಲಯನ್ಸ್ ಕ್ಲಬ್ ವತಿಯಿಂದ ಸೀರೆ ವಿತರಣೆ

0

ಗಾಂಧಿಜಯಂತಿ ಆಚರಣೆ ಪ್ರಯುಕ್ತ ಗುತ್ತಿಗಾರು ಲಯನ್ಸ್ ಕ್ಲಬ್ ವತಿಯಿಂದ ಸ್ವಚ್ಛತಾ ಶ್ರಮದಾನವನ್ನು ಅ.2 ಹಮ್ಮಿಕೊಳ್ಳಲಾಗಿತ್ತು.

ಈ ಸಂಧರ್ಭದಲ್ಲಿ ಗುತ್ತಿಗಾರು ಗ್ರಾಮ ಪಂಚಾಯತಿನಲ್ಲಿ ಸ್ವಚ್ಛತಾ ಸಿಬ್ಬಂದಿಗಳಾಗಿ ದುಡಿಯುತ್ತಿರುವ ಮಹಿಳೆಯರಿಗೆ ಕ್ಲಬ್ ವತಿಯಿಂದ ಸೀರೆಗಳನ್ನು ವಿತರಿಸಲಾಯಿತು. ಈ ಉಡುಗೊರೆಯನ್ನು ಸುಳ್ಯದ ಶಾಸಕಿಯಾದ ಕು| ಭಾಗೀರಥಿ ಮುರುಳ್ಯರವರು ವಿತರಿಸಿದರು. ಲಯನ್ ಜಿಲ್ಲಾ ಮಾಜಿ ರಾಜ್ಯಪಾಲರಾದ ಎಂ.ಬಿ.ಸದಾಶಿವ ರವರು ಈ ಉಡುಗೊರೆಗಳನ್ನು ಕೊಡುಗೆಯಾಗಿ ನೀಡಿದ್ದರು.