ಬೆಟ್ಟಂಪಾಡಿ ಮಂಜುನಾಥೇಶ್ವರ ಭಜನಾ ಮಂದಿರದಲ್ಲಿ ಮಕ್ಕಳ ಭಜನಾ ತರಬೇತಿ ಶಿಬಿರಕ್ಕೆ ಚಾಲನೆ

0

ಭಜನೆಯಿಂದ ಮಕ್ಕಳ ಮನಸ್ಸು ಹಗುರವಾಗಿ ದೇಹಕ್ಕೆಉಲ್ಲಾಸ ಲಭಿಸುವುದು : ಸುಧಾಕರ ಕಾಮತ್

ಬೆಟ್ಟಂಪಾಡಿ ಶ್ರೀ ಮಂಜುನಾಥೇಶ್ವರ ಭಜನಾ ಮಂದಿರ ,ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಹಾಗೂ ತಾಲೂಕು ಮಂಜುನಾಥೇಶ್ವರ ಭಜನಾ ಪರಿಷತ್ ಇದರ ಸಹಯೋಗದಲ್ಲಿ ತಾಲೂಕು ಮಟ್ಟದ ಮಕ್ಕಳ ಭಜನಾ ತರಬೇತಿ ಶಿಬಿರಕ್ಕೆ ಅ.11 ರಂದು ಚಾಲನೆ ನೀಡಲಾಯಿತು.

ಉದ್ಯಮಿಗಳು ಅಡ್ಕಾರ್ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀ.ಸ.ಅಧ್ಯಕ್ಷ ಸುಧಾಕರ ಕಾಮತ್ ದೀಪ ಪ್ರಜ್ವಲಿಸಿ ಶುಭ ಹಾರೈಸಿದರು.
ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಯತೀಶ್ ರೈ ದುಗಲಡ್ಕ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಲೋಕನಾಥ್ ಅಮೆಚೂರ್ , ಮಂದಿರದ ಸ್ಥಾಪಾಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ, ಮಂದಿರದ ಅಧ್ಯಕ್ಷ ಅವಿನ್ ಬೆಟ್ಟಂಪಾಡಿ, ಸಂಪನ್ಮೂಲ ವ್ಯಕ್ತಿ ಶ್ರೀಮತಿ ಮಹಾಲಕ್ಷ್ಮಿ ಪ್ರಕಾಶ್ ಮರ್ಕಂಜ, ಪರಿಷತ್ ಕಾರ್ಯದರ್ಶಿ ಸತೀಶ್ ಟಿ.ಎನ್ ಉಪಸ್ಥಿತರಿದ್ದರು.

ಶ್ರೀಮತಿ ಸರಸ್ವತಿ ಬೆಟ್ಟಂಪಾಡಿ,ಶ್ರೀಮತಿ ಪ್ರೇಮ ಬೆಟ್ಟಂಪಾಡಿ, ಶ್ರೀಮತಿ ಗೀತಾ ಬೆಟ್ಟಂಪಾಡಿ ಪ್ರಾರ್ಥಿಸಿದರು.
ಮಲ್ಲೇಶ್ ಬೆಟ್ಟಂಪಾಡಿ ಸ್ವಾಗತಿಸಿದರು. ಅವಿನ್ ಬೆಟ್ಟಂಪಾಡಿ ವಂದಿಸಿದರು. ಸುದ್ದಿ ವರದಿಗಾರ ಭಜನಾ ಪರಿಷತ್ ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಒಂದರಿಂದ ಹತ್ತನೆ ತರಗತಿಯ ಮಕ್ಕಳು ಶಿಬಿರದಲ್ಲಿ ಸುಮಾರು 100 ಕ್ಕೂ ಮಿಕ್ಕಿ ಮಂದಿ ಭಾಗವಹಿಸಿದರು.
5 ದಿನಗಳ ಕಾಲ ಕುಳಿತು ಮತ್ತು ಕುಣಿತ ಭಜನೆಯು ನುರಿತ ಭಜನಾ ತರಬೇತುದಾರರಿಂದ ನಡೆಯಲಿದೆ.

ಭಜನಾ ಮಂದಿರದ ಹಾಗೂ ಮಂಡಳಿಯ ಪದಾಧಿಕಾರಿಗಳು ಸದಸ್ಯರು ಸಹಕರಿಸಿದರು.