ಹಳೆಗೇಟು: ಬೃಹತ್ ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟ ಸ್ಥಳೀಯ ಯುವಕರು

0

ಹಳೆಗೇಟು ಬಳಿ ರಸ್ತೆ ಬದಿಯಲ್ಲಿ ಕಂಡುಬಂದ ಬೃಹದಾಕಾರದ ಹೆಬ್ಬಾವನ್ನು ಸ್ಥಳೀಯ ಯುವಕರು ಹಿಡಿದು ಕಾಡಿಗೆ ಬಿಟ್ಟ ಘಟನೆ ಇಂದು ರಾತ್ರಿ ನಡೆದಿದೆ.

ಸುಮಾರು 12 ಅಡಿ ಉದ್ದದ ಹೆಬ್ಬಾವು ಹಳೆಗೇಟು ಸತೀಶ್ ಭಟ್ ರವರ ಮನೆಯ ಮುಂಭಾಗದ ರಸ್ತೆ ಬದಿಯಲ್ಲಿರುವುದನ್ನು ಕಂಡ ಸ್ಥಳೀಯ ಯುವಕರು ಅದನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಸ್ಥಳೀಯ ಯುವಕರಾದ ಆರಿಸ್, ಅಶ್ರಫ್, ರಶೀದ್, ಸಚಿನ್ ಸೇರಿದಂತೆ ಇನ್ನಿತರ ಯುವಕರು ಹಾವನ್ನು ಹಿಡಿಯುವ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.