ಸುಳ್ಯ ಪೊಲೀಸ್ ಠಾಣೆಯಲ್ಲಿ ಸಡಗರದ ಆಯುಧ ಪೂಜೆ

0

ಮಂಗಳೂರು ಅಡಿಷನಲ್ ಎಸ್ಪಿ ಮತ್ತು ಡಿ ವೈ ಎಸ್ ಪಿ ಸೇರಿದಂತೆ ಎಲ್ಲಾ ಪೊಲೀಸರು ಭಾಗಿ

ಸುಳ್ಯ ಪೊಲೀಸ್ ಠಾಣೆಯಲ್ಲಿ ಸಡಗರದ ಆಯುಧ ಪೂಜಾ ಕಾರ್ಯಕ್ರಮ ಅಕ್ಟೋಬರ್ 23ರಂದು ಸಂಜೆ ನಡೆಯಿತು.

ಪೊಲೀಸ್ ಠಾಣೆಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಚಿತ್ರ ಹಾಗೂ ಕಳಶ ಪ್ರತಿಷ್ಠಾಪನೆ ಮಾಡಿ ಪೂಜಾ ಕಾರ್ಯಕ್ರಮ ನಡೆಯಿತು.
ಜೊತೆಗೆ ಪೊಲೀಸ್ ಠಾಣೆಗೆ ಮತ್ತು ಸಿಬ್ಬಂದಿಗಳಿಗೆ ಸಂಬಂಧಿಸಿದ ವಾಹನಗಳಿಗೆ ಪೂಜೆ ಹಾಗೂ ಠಾಣೆಯಲ್ಲಿ ಇರಿಸಲಾಗಿರುವ ಬಂದೂಕುಗಳಿಗೆ ಪೂಜಾ ಕಾರ್ಯಕ್ರಮ ನಡೆಯಿತು.

ಪುರೋಹಿತರಾದ ಬ್ರಹ್ಮಶ್ರೀ ನಾಗರಾಜ ಭಟ್ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.
ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು ನೇತೃತ್ವವನ್ನು ವಹಿಸಿದ್ದರು.
ಪೂಜಾ ಕಾರ್ಯಕ್ರಮದಲ್ಲಿ ಮಂಗಳೂರು ಅಡಿಷನಲ್ ಎಸ್ಪಿ ಧರ್ಮಪ್ಪ, ಪುತ್ತೂರು ವಿಭಾಗದ ಡಿವೈಎಸ್ಪಿ ಡಾ.ಗಾನಾ ಪಿ ಕುಮಾರ್ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಅದ್ದೂರಿಯಿಂದ ನಡೆದ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಸುಳ್ಯ ಪೊಲೀಸ್ ಠಾಣೆಯ ಎಲ್ಲಾ ಅಧಿಕಾರಿಗಳು,ಸಿಬ್ಬಂದಿ ವರ್ಗದವರು,ಪುಟಾಣಿ ಮಕ್ಕಳು ಭಾಗವಹಿಸಿ ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಮುಖಂಡರುಗಳಾದ ನಗರ ಪಂಚಾಯತ್ ಸದಸ್ಯ ಎಂ ವೆಂಕಪ್ಪ ಗೌಡ,ಸುಳ್ಯ ವಕೀಲರ ಸಂಘದ ಅಧ್ಯಕ್ಷ ಕೆ ನಾರಾಯಣ್, ಮುಖಂಡರುಗಳಾದ ಹಾಜಿ ಆದಂ ಕಮ್ಮಾಡಿ, ಮಹಮ್ಮದ್ ಕುನ್ನಿ ಗೂನಡ್ಕ, ರಂಜಿತ್ ಪೂಜಾರಿ, ಶಾಫಿ ಕುತ್ತ ಮಟ್ಟೆ, ಕೆ ಗೋಕುಲ್ ದಾಸ್, ರಾಜು ಪಂಡಿತ್, ಅಬ್ದುಲ್ ಲತೀಫ್ ಹರ್ಲಡ್ಕ, ಯಶ್ವಿತ್ ಕಾಳಮ್ಮನೆ, ಗಿರೀಶ್ ಕುರುಂಜಿಗುಡ್ಡೆ, ಶಶಿಕಲಾ ನೀರ ಬಿದ್ರೆ, ಸುಶೀಲಾ ದುಗಲಡ್ಕ, ರಿಯಾಜ್ ಕಟ್ಟೆಕ್ಕಾರ್ಸ್, ಮೊದಲಾದವರು ಉಪಸ್ಥಿತರಿದ್ದರು.