ಬಳ್ಪ ಗ್ರಾಮದ ಬೀದಿಗುಡ್ಡೆ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಸಂಪ್ಯಾಡಿ ಇದರ ಕಾರ್ಯಕಾರಿ ಸಮಿತಿಯ ಸಭೆ ಅ. 21ರಂದು ಸಂಸ್ಥೆಯ ಸ್ಥಾಪಕಾಧ್ಯಕ್ಷ ವಿಶ್ವನಾಥ ರೈ ಅರ್ಗುಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿ ರಚನೆ ಮಾಡಲಾಗಿದ್ದು, ನೂತನ ಅಧ್ಯಕ್ಷರಾಗಿ ಎಲ್ಯಣ್ಣ ಗೌಡ ಕಟ್ಟ, ಉಪಾಧ್ಯಕ್ಷರಾಗಿ ಹೊನ್ನಪ್ಪ ಗೌಡ ಕಲ್ಲುಗುಂಡಿ (ದೋಳ್ತಿಲ), ಕಾರ್ಯದರ್ಶಿಯಾಗಿ ಮೋಹನ ಕಲ್ಲುಗುಂಡಿ, ಉಪ ಕಾರ್ಯದರ್ಶಿಯಾಗಿ ಗಣೇಶ್ ಕೊಠಾರಿ, ಕೋಶಾಧಿಕಾರಿಯಾಗಿ ಪುಟ್ಟಣ್ಣ ಕಾಪಿನಕಾಡು ಇವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.