ಶ್ರೀ ಶಾರದಾಂಬ ದಸರಾ ಉತ್ಸವ 2023 ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭ

0

ಶಾರದಾ ಮಾತೆಯ ಆರಾಧನೆಯಿಂದ ಸುಳ್ಯ ದಸರಾ ಜನಮೆಚ್ಚುಗೆ ಪಡೆದಿದೆ: ಸಂಸದ ಕಟೀಲ್

ಮುಂದಿನ ಬಾರಿ ಸುಳ್ಯ ದಸರಾ ಉತ್ಸವಕ್ಕೆ ಸರ್ಕಾರದಿಂದ ಅನುದಾನಕ್ಕೆ ಪ್ರಯತ್ನ : ಶಾಸಕಿ ಭಾಗೀರಥಿ ಮುರುಳ್ಯ

ಸುಳ್ಯದ ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ , ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿಯ ವತಿಯಿಂದ ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗದ ಶಾರದಾಂಬ ಕಲಾವೇದಿಕೆಯಲ್ಲಿ ನಡೆಯುತ್ತಿರುವ 52ನೇ ವರ್ಷದ ಶ್ರೀ ಶಾರದಾಂಬ ಉತ್ಸವ ಸುಳ್ಯ ದಸರಾ 2023 ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭವು ಅ.27ರಂದು ರಾತ್ರಿ ನಡೆಯಿತು.

ಶಾಸಕಿ ಭಾಗೀರಥಿ ಮುರುಳ್ಯ ಅವರು ಅಧ್ಯಕ್ಷತೆ ವಹಿಸಿದ್ದರು.
ದಸರಾ ಉತ್ಸವ ಸಮಿತಿ ಗೌರವಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ನವರಾತ್ರಿಯಲ್ಲಿ ದಸರಾ ಆರಾಧನೆ ವಿಶಿಷ್ಟ ರೀತಿಯಲ್ಲಿ ನಡೆಯುತ್ತದೆ. ಕಲೆ ಹಾಗೂ ಸಾಹಿತ್ಯದ ಮೂಲಕ ಶಸ್ತ್ರ ಮತ್ತು ಶಾಸ್ತ್ರದ ಆರಾಧನೆ ಭಾರತ ದೇಶದಲ್ಲಿ ಮಾತ್ರ ಕಾಣಲು ಸಾಧ್ಯ. ಸಾಹಿತ್ಯ ಮತ್ತು ಸಂಗೀತದ ಒಡತಿ ಶಾರದಾಮಾತೆ. ಶಾರದಾಮಾತೆಯನ್ನು ಸಂಗೀತದ ಮೂಲಕ ಆರಾಧನೆ ಮಾಡಲಾಗುತ್ತದೆ.ಸಂಗೀತಕ್ಕೆ ಪ್ರೇರಣೆಯಾದ ಶಾರದಾ ಮಾತೆಯ ಆರಾಧನೆಯ ಸುಳ್ಯ ದಸರಾವು ಮುಂದಿನ ದಿನಗಳಲ್ಲಿ ಮೈಸೂರು, ಮಂಗಳೂರು ದಸರಾದಂತೆ ಜನಮೆಚ್ಚುಗೆ ಪಡೆಯಲಿ ಎಂದು ಹೇಳಿದರು.

ಶಾಸಕಿ ಭಾಗೀರಥಿ ಮುರುಳ್ಯ ಅವರು ಮಾತನಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಮಗೆ ಮನೋರಂಜನೆ ನೀಡುವುದರ ಮೂಲಕ ಸಾಂಸ್ಥಿಕ ಕಲೆಯನ್ನು ನೀಡುತ್ತದೆ. ಸರ್ಕಾರದಿಂದ ಸುಳ್ಯ ದಸರಾಕ್ಕೆ ಐದು ಲಕ್ಷ ಅನುದಾನ ನೀಡಬೇಕೆಂದು ಈಗಾಗಲೇ ಸಚಿವರಿಗೆ ಮನವಿ ಮಾಡಿದ್ದೇನೆ.
ಖಂಡಿತವಾಗಿಯೂ ಮುಂದಿನ ವರ್ಷದಿಂದ ಸುಳ್ಯ ದಸರಾಕ್ಕೆ ಸರ್ಕಾರದಿಂದ ಅನುದಾನ ಒದಗಿಸಲು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು. ‌‌

ಮಾಜಿ ಸಚಿವ ರಮಾನಾಥ ರೈ ಅವರು ಮಾತನಾಡಿ ಸುಳ್ಯದ ಈ ಪ್ರದೇಶದಲ್ಲಿ ಜನರ ಧಾರ್ಮಿಕ, ಆದ್ಯಾತ್ಮಿಕ ಭಾವನೆ ಮನಸ್ಸಿಗೆ ಮುಟ್ಟುವ ರೀತಿಯಲ್ಲಿ ಸಂಘಟನೆಯನ್ನು ಕಟ್ಟಿಕೊಂಡು , ಜನರನ್ನು ಒಗ್ಗೂಡಿಸಿ, ಉತ್ಸವ ಮಾಡಲಾಗುತ್ತಿದೆ. ಧರ್ಮ , ನಂಬಿಕೆ ಮೇಲೆ ಪ್ರೀತಿ – ವಿಶ್ವಾಸ ಹಾಗೂ ಗೌರವವನ್ನು ಕೊಡುವ ಮೂಲಕ ಮುಂದಿನ ದಿನಗಳಲ್ಲಿ ಉತ್ಸವವು ಇನ್ನಷ್ಟು ವಿಜೃಂಭಣೆಯಿಂದ ನಡೆಯಲಿ ಎಂದು ಶುಭಹಾರೈಸಿದರು‌.
ಮಾಜಿ ಸಚಿವ ಎಸ್. ಅಂಗಾರ ಅವರು ಮಾತನಾಡಿ ಶಾರದಾಂಬ ಉತ್ಸವವಾಗಿ ನಡೆಯುತ್ತಿದ್ದ ನಾಡಹಬ್ಬ ಶಾರದಾಂಬೋತ್ಸವವು ಕಳೆದ ಹನ್ನೆರಡು ವರ್ಷಗಳ ಹಿಂದಿನಿಂದ ಸುಳ್ಯ ದಸರಾ ಉತ್ಸವವಾಗಿ ನಡೆಯುತ್ತಿದೆ. ಭಕ್ತಿ -ಭಾವನೆ ಮೂಲಕ ದೇವರ ಆರಾಧನೆ ಮಾಡುವುದರಿಂದ ದೇವರನ್ನು ಒಲಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ ಗೌರವಾಧ್ಯಕ್ಷ ಕೆ. ಗೋಕುಲ್ ದಾಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸುಳ್ಯದ ಶ್ರೀ ಶಾರದಾಂಬ ಉತ್ಸವದ ಪ್ರಾರಂಭದ ದಿನಗಳ ಕುರಿತು ಮಾತನಾಡಿದರು.
ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಉಪಾಧ್ಯಕ್ಷ ನಾರಾಯಣ ಕೇಕಡ್ಕ ಅವರು ಮಾತನಾಡಿ ದಸರಾ ಉತ್ಸವದ ಶೋಭಾಯಾತ್ರೆಯ ಮೆರಗು ಹೆಚ್ಚಿಸುವ ಟ್ಯಾಬ್ಲೋ ಗಳ ನಿರ್ಮಾಣ ಕಾರ್ಯ ಶ್ರೀದೇವಿಯ ಶೋಭಾಯಾತ್ರೆಯ ಕುರಿತು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಚಲನಚಿತ್ರ ಸಂತೋಷ್ ಕೊಡಂಕೇರಿ, ಶ್ರೀಮತಿ ಪಾವನಾ ಸಂತೋಷ್ ಕೊಡಂಕೇರಿ, ಮಾಂಡವಿ ಮೋಟರ್ಸ್ ನ ಸುರೇಶ್ ಎ.ಜಿ. ಶ್ರೀ ಶಾರದಾಂಬ ಸೇವಾ ಸಮಿತಿ ಗೌರವಾಧ್ಯಕ್ಷ ಕೆ. ಗೋಕುಲ್ ದಾಸ್, ಅಧ್ಯಕ್ಷ ಚಿದಾನಂದ ವಿದ್ಯಾನಗರ, ಪ್ರಧಾನ ಕಾರ್ಯದರ್ಶಿ ರವಿಚಂದ್ರ ಕೊಡಿಯಾಲಬೈಲು, ಕೋಶಾಧಿಕಾರಿ ಪುರುಷೋತ್ತಮ ಕೆ., ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಅಧ್ಯಕ್ಷ ನವೀನ್ ಚಂದ್ರ ಕೆ.ಎಸ್., ಉಪಾಧ್ಯಕ್ಷ ನಾರಾಯಣ ಕೇಕಡ್ಕ, ಪ್ರಧಾನ ಕಾರ್ಯದರ್ಶಿ ಯಂ.ಕೆ. ಸತೀಶ್, ಸಮಿತಿ ನಿರ್ದೇಶಕ ಕೆ. ರಾಜು ಪಂಡಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಉಪಾಧ್ಯಕ್ಷ ಬೂಡು ರಾಧಾಕೃಷ್ಣ ರೈ ಸ್ವಾಗತಿಸಿ, ಶಾರದಾಂಬ ಸೇವಾ ಸಮಿತಿ ಅಧ್ಯಕ್ಷ ಚಿದಾನಂದ ವಿದ್ಯಾನಗರ ವಂದಿಸಿದರು. ಪತ್ರಕರ್ತ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.