ಬೆಂಗಳೂರಿನಿಂದ ಈಶ್ವರಮಂಗಲಕ್ಕೆ ತೆರಳುತ್ತಿದ್ದ ಈಚರ್ ಲಾರಿಯೊಂದು ಜಾಲ್ಸೂರು ಸಮೀಪದ ನಡುವಡ್ಕ ಬಳಿ ಅಪಘಾತವಾದ ಘಟನೆ ಇದೀಗ ಅ.28ರಂದು ಬೆಳಗ್ಗೆ ನಡೆದಿದೆ.
ಈಶ್ವರಮಂಗಲ ಮೂಲದವರು ಬೆಂಗಳೂರಿನಲ್ಲಿ ಬಾಡಿಗೆ ಮನೆ ಖಾಲಿ ಮಾಡಿದ್ದು, ಅದನ್ನು ಇಬ್ಬರು ಕೆಲಸದವರು ಸೇರಿದಂತೆ ಚಾಲಕ ಬೆಂಗಳೂರಿನಿಂದ ಈಶ್ವರಮಂಗಲದ ಅವರ ಮನೆಗೆ ಈಚರ್ ಲಾರಿಯಲ್ಲಿ ತರುತ್ತಿದ್ದ ಸಂದರ್ಭ ನಡುವಡ್ಕ ಸಮೀಪ ಕಾರ್ಯನಿರ್ವಹಿಸುತ್ತಿರುವ ರಾಯಲ್ ಕಾರ್ ವಾಷ್ ನ ಬೋರ್ಡ್ ಗೆ ಡಿಕ್ಕಿ ಹೊಡೆದು ಸಮೀಪ ಇರುವ
ಜಿ. ಎಂ. ಸ್ಟೋರ್ ಕಲಂದರ್ ರವರ ಕಾಂಪೌಂಡ್ ಒಳಗೆ ನುಗ್ಗಿ ತೆಂಗಿನ ಮರಕ್ಕೆ ಡಿಕ್ಕಿಯಾಗಿ ತೆಂಗಿನಮರ ಉರುಳಿಬಿತ್ತು.
ಲಾರಿಯ ಎದುರು ಭಾಗ ಸಂಪೂರ್ಣ ನಜ್ಜುಗುದ್ದು ಆದ ಪರಿಣಾಮ ಚಾಲಕ
ಜಯರಾಜ್ ರವರು ಸುಮಾರು ಅರ್ಧ ಗಂಟೆಗಳ ಕಾಲ ಅದರಲ್ಲೇ ಬಾಕಿ ಆದರು. ಅವರ ಕಾಲು ಜಾಮ್ ಆಗಿ ಹೊರಗೆ ಬರಲು ಕಷ್ಟವಾಯಿತು.
ನಂತರ ಸ್ಥಳೀಯರ ಸಹಕಾರದಿಂದ ಅವರನ್ನು ಹೊರಗೆ ಕರೆತಂದು ಸುಳ್ಯದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಗೆ ಕರೆದು ಹೋಗಲಾಯಿತು.
ಜಯರಾಜ್ ರವರು ಸುಮಾರು ಅರ್ಧ ಗಂಟೆಗಳ ಕಾಲ ಅದರಲ್ಲೇ ಬಾಕಿ ಆದರು. ಅವರ ಕಾಲು ಜಾಮ್ ಆಗಿ ಹೊರಗೆ ಬರಲು ಕಷ್ಟವಾಯಿತು.
ನಂತರ ಸ್ಥಳೀಯರ ಸಹಕಾರದಿಂದ ಅವರನ್ನು ಹೊರಗೆ ಕರೆತಂದು ಸುಳ್ಯದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಗೆ ಕರೆದು ಹೋಗಲಾಯಿತು.
ಲಾರಿ ಚಾಲಕನ ಕಾಲಿಗೆ ಅಲ್ಪಸಲ್ಪ ಗಾಯವಾಗಿದ್ದು, ರಾಯಲ್ ಕಾರ್ ವಾಶ್ ನವರ ಬೋರ್ಡ್, ಜಿ. ಎಂ. ಸ್ಟೋರ್ ಕಲಂದರ್ ರವರ ಕಾಂಪೌಂಡ್, ತೆಂಗಿನ ಮರ
ಹಾನಿಯಾಗಿದೆ.