ಹಳೆಗೇಟು ಪೆಟ್ರೋಲ್ ಬಂಕ್ ಮುಂಭಾಗದ ಮಾಣಿ-ಮೈಸೂರು ಹೆದ್ದಾರಿಯ ತಿರುವಿನಲ್ಲಿ ರಸ್ತೆ ಬದಿಯಲ್ಲಿರುವ ಕಾಡು ಪೊದೆಗಳು ರಸ್ತೆಗೆ ತಾಗಿಕೊಂಡಿದ್ದು ಅಪಾಯದ ಮುನ್ಸೂಚನೆಯನ್ನು ನೀಡುತ್ತಿದೆ. ಕಾಡು ಪೊದೆಗಳು ಬೃಹತಾಕಾರದಲ್ಲಿ ರಸ್ತೆಗೆ ವಾಲಿಕೊಂಡಿದ್ದು ಒಂದು ಕಡೆಯಿಂದ ಬರುವ ವಾಹನಗಳಿಗೆ ಎದುರಿನಿಂದ ಬರುವ ವಾಹನಗಳು ಕಾಣದೆ ಅಪಘಾತಗಳು ಸಂಭವಿಸುವ ಆತಂಕ ಕಂಡು ಬರುತ್ತಿದೆ.
ಅಲ್ಲದೆ ಈ ಭಾಗದ ವಿದ್ಯುತ್ ಕಂಬ ಮತ್ತು ತಂತಿಗಳಿಗೆ ಕಾಡು ಬಳ್ಳಿಗಳು ಸುತ್ತಿಕೊಂಡಿದ್ದು ಮುಂದಿನ ದಿನಗಳಲ್ಲಿ ವಿದ್ಯುತ್ ಸ್ಪಾರ್ಕ್‌ಗೊಳ್ಳುವ ಆತಂಕ ಕೂಡಾ ಇದೆ. ಆದ್ದರಿಂದ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.