ಸುಳ್ಯದ ಕಲ್ಲುಮುಟ್ಲಿನಲ್ಲಿ ಪಯಸ್ವಿನಿ ನದಿಗೆ ಕಟ್ಟಲಾಗಿರುವ ಕಿಂಡಿ ಅಣೆಕಟ್ಟಿನಲ್ಲಿ ನೀರು ಶೇಖರಣೆ ಆರಂಭಗೊಂಡಿದೆ.
ಅ.28 ರಂದು ಕಿಂಡಿಅಣೆಕಟ್ಟಿನ ಗೇಟು ಹಾಕಲಾಗಿದ್ದು ನೀರು ಶೇಖರಿಸಲಾಗಿದೆ. ಗೇಟು ತುಂಬಿ ಹೆಚ್ಚುವರಿ ನೀರು ಹೊರಗೆ ಹರಿದುಹೋಗುತಿದೆ.
“ಪಯಸ್ವಿನಿ ನದಿಯ ನೀರಿನ ಈಗಿನ ಮಟ್ಟವನ್ನು ನೋಡಿಕೊಂಡು ಕಿಂಡಿಅಣೆಕಟ್ಟು ಗೇಟು ಹಾಕಲಾಗಿದೆ. ಹೆಚ್ಚುವರಿ ನೀರು ಹೊರ ಹರಿಯುತ್ತದೆ. ನವೆಂಬರ್ ಆರಂಭದಲ್ಲಿ ಎಲ್ಲ ಕಡೆಯೂ ಅಣೆಕಟ್ಟಿನ ಗೇಟು ಹಾಕಲಾಗುತ್ತದೆ. ಮುಂದಿನ ಮಳೆಗಾಲದ ಆರಂಭದಲ್ಲಿ ಗೇಟು ಮತ್ತೆ ತೆಗೆಯಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ತಿಳಿಸಿದ್ದಾರೆ.