ವೈಟ್ ಬೋರ್ಡ್ ಕಾರಲ್ಲಿ ಬಾಡಿಗೆ ಮಾಡಿದ ಆರೋಪ

0

ಸುಳ್ಯದ ಕಾರು ಪುತ್ತೂರಲ್ಲಿ ವಶ

ಸುಳ್ಯ ಹಳೆಗೇಟು ಮೂಲದ ವೈಟ್ ಬೋರ್ಡ್ ಕಾರಿನಲ್ಲಿ ಬಾಡಿಗೆಗೆ ಜನರನ್ನು ಕರೆದುಕೊಂಡು ಹೋಗಿದ್ದಾರೆ ಎಂಬ ಆರೋಪದಡಿಯಲ್ಲಿ ಪುತ್ತೂರು ಬೈಪಾಸ್ ಸಮೀಪ ಆರ್ ಟಿ ಓ ಅಧಿಕಾರಿಗಳು ಕಾರನ್ನು ತಡೆದು ನಿಲ್ಲಿಸಿ ಚಾಲಕನಿಗೆ ದಂಡ ವಿಧಿಸಿರುವುದಾಗಿ ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಕಾರಿನಲ್ಲಿ ಇದ್ದ ಪ್ರಯಾಣಿಕರನ್ನು ಅಧಿಕಾರಿಗಳು ಬೇರೆ ವಾಹನದಲ್ಲಿ ಸುಳ್ಯಕ್ಕೆ ಕಳಿಸಿರುವುದಾಗಿ ತಿಳಿದು ಬಂದಿದೆ.