ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸ್ಥೆ ಇದರ ಪಂಜ ಶಾಖೆಯ ಉದ್ಘಾಟನೆ ಮತ್ತು ತೆಂಗು ಕೊಯ್ಲುಗಾರಿಗೆ ಉಚಿತ ವಿಮಾ ನೋಂದಾವಣಾ ಕಾರ್ಯಕ್ರಮ ನ.1 ರಂದು ಪಂಜ ಮುಖ್ಯ ರಸ್ತೆ ಬಳಿ ಇರುವ ಕಮಿಲ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಪ್ರಗತಿಪರ ಕೃಷಿಕ,ಹಿರಿಯ ವೈದ್ಯ ಡಾ.ರಾಮಯ್ಯ ಭಟ್ ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿ “ತೆಂಗಿನ ಮಾರುಕಟ್ಟೆಯಲ್ಲಿ ಸಮರ್ಪಕವಾಗಿ ಬೆಲೆ ದೊರಕಲು. ತೆಂಗು ಕೃಷಿ ಅಭಿವೃದ್ಧಿಗಾಗಿ ಸಹಕಾರ ನೀಡಲೆಂದು ಪ್ರಾರಂಭ ಗೊಂಡ ಸಂಸ್ಥೆಯಿದು.” ಎಂದು ಹೇಳಿದರು.
ಮುಖ್ಯ ಅತಿಥಿ ದ.ಕ.ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸ್ಥೆಯ ಸಲಹಾ ಸಮಿತಿ ಸದಸ್ಯ ನಿತ್ಯಾನಂದ ಮುಂಡೋಡಿ ಮಾತನಾಡಿ
” ತೆಂಗು ಉತ್ಪಾದಕರ ಸಂಸ್ಥೆ ಎರಡು ವರ್ಷದಲ್ಲಿ 16000 ಸದಸ್ಯರ ಹೊಂದಿ ಬಲಿಷ್ಠವಾಗಿ ಬೆಳೆಯುತ್ತಿರುವ ಸಂಸ್ಥೆ . ತೆಂಗಿನ ಬೆಳೆಯಲ್ಲಿ ಹೊಸ ಉತ್ಪನ್ನಗಳನ್ನು ತಯಾರಿಸಿ ರೈತರ ಸಮಸ್ಯೆಗಳ ಸ್ಪಂದಿಸಲಿರುವ ಸಂಸ್ಥೆ”.ಎಂದು ಹೇಳಿದರು.
ಮುಖ್ಯ ಅತಿಥಿ ಹಿರಿಯ ಸಹಕಾರಿ ಧುರೀಣ ಜಾಕೆ ಮಾಧವ ಗೌಡ ಮಾತನಾಡಿ “ಸಂಸ್ಥೆಯ ಎಲ್ಲಾ ರೈತ ಸದಸ್ಯರು ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ಸೇರಿ ಕೊಂಡು ಸಂಸ್ಥೆಯನ್ನು ನಾವೆಲ್ಲರೂ ಮುನ್ನಡೆಸಿ ಅಭಿವೃದ್ಧಿ ಪಡಿಸುವ”.ಎಂದು ಹೇಳಿದರು.
ದ.ಕ.ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಕುಸುಮಾಧರ ಎಸ್ ಕೆ ಸಭಾಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ,
ಹಾಗೂ ಸಂಸ್ಥೆಯ ನಿರ್ದೇಶಕ ಗಿರಿಧರ ಎಸ್, ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೇತನ್ ಎ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಸಂಸ್ಥೆಯ ಪ್ರಚಾರ ಚಿತ್ರವನ್ನು ಅನೇಕ ಬಸ್ ತಂಗುದಾಣದಲ್ಲಿ ಬಿಡಿಸಿದ್ದು ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆ ಸಿಬ್ಬಂದಿ ದಿನೇಶ್ ರವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ಕಾವ್ಯ ಎಮ್ ಪ್ರಾರ್ಥಿಸಿದರು.ಗಿರಿಧರ ಎಸ್
ಸ್ವಾಗತಿಸಿದರು. ಚೇತನ್ ಎ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಯೋಜನೆಯನ್ನು ನವ್ಯಶ್ರೀ ಅಮೈ ತಿಳಿಸಿದರು.
ಸೌಮ್ಯ ಪಿ ಬಿ ನಿರೂಪಿಸಿದರು.
ಪೂಜಾ ಪಿ ಹೆಚ್ ವಂದಿಸಿದರು.