ಕಲ್ಲೋಣಿ ಸಮೀಪದ ರಸ್ತೆ ಹೊಂಡಗುಂಡಿಗಳಿಂದ ಕೂಡಿದ್ದು ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆಯಾಗಿದೆ.ಕಲ್ಲೋಣಿ ಗುಳಿಗನಕಟ್ಟೆ ಸಮೀಪವಿರುವ ಈ ರಸ್ತೆ ಮಳೆ ನೀರಿಗೆ ಮಣ್ಣುಕೊಚ್ಚಿಕೊಂಡು ಹೋಗಿದ್ದು ಈಗ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.ಹಲವು ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು ಸಾರ್ವಜನಿಕ ಕುಡಿಯುವ ನೀರಿನ ಟಾಂಕಿ ಕೂಡ ಈ ರಸ್ತೆಯ ಮೂಲಕವೆ ಹೋಗಬೇಕು.
ಈ ರಸ್ತೆಗೆ ಅನುದಾನ ಇರಿಸಿ ರಸ್ತೆಯನ್ನು ಕೂಡಲೇ ದುರಸ್ಥಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.