ಪೆರಾಜೆ ಜ್ಯೋತಿ ಪ್ರೌಢ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ವನ್ನು ನ.01 ರಂದು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಲಾ ಸಂಚಾಲಕರಾದ ಹರಿಶ್ಚಂದ್ರ ಮುಡುಕಜೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಾಹಿತಿಗಳಾದ ನೀರ ಬಿದಿರೆ ನಾರಾಯಣರವರು ವಿದ್ಯಾರ್ಥಿ ಗಳಿಗೆ ಕನ್ನಡ ಭಾಷೆ, ಸಾಹಿತ್ಯ ಬರಹ ಹಾಗೂ ಕವನ ರಚನೆಯ ಬಗ್ಗೆ ಆಸಕ್ತಿ ಮೂಡುವಂತೆ ಸಮಗ್ರ ಮಾಹಿತಿ ನೀಡಿದರು. ಕನ್ನಡ ಭಾಷೆ ಉಳಿಯಬೇಕು. ಭಾಷೆಯ ಬಗ್ಗೆ ನಮಗೆ ಹೆಮ್ಮೆ ಇರಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಶಿಕ್ಷಕರಾದ ನಾಗರಾಜ್ ಜಿ.ಆರ್., ಕನ್ನಡ ಭಾಷಾ ಶಿಕ್ಷಕರಾದ ವೇಣುಗೋಪಾಲ್ ಕೊಯಿಂಗಾಜೆ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಕನ್ನಡ ಗೀತೆಗಳನ್ನು ಹಾಡಿ ಸಂಭ್ರಮಿಸಿದರು. ಶಿಕ್ಷಕಿ ಶ್ರೀಮತಿ ಚಂದ್ರಮತಿ ಕುಂಬಳಚೇರಿ ರವರು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.