ಬಾಳಿಲದ ಶ್ರೀ ಮಂಜುನಾಥೇಶ್ವರ ಜಾನಪದ ಕಲಾ ಸಂಘದ 14ನೇ ವಾರ್ಷಿಕೋತ್ಸವ, ಕ್ರೀಡಾ ಸ್ಪರ್ಧೆ, ಸಭೆ ಸನ್ಮಾನ ಮತ್ತು ಯಕ್ಷಗಾನ ಬಯಲಾಟ ಅ. 29ರಂದು ಬಾಳಿಲ ವಿದ್ಯಾಬೋಧಿನೀ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಿತು.
ಬೆಳಿಗ್ಗೆ ಬಾಳಿಲ ಗ್ರಾ.ಪಂ. ಸದಸ್ಯ ರಮೇಶ್ ರೈ ಅಗಲ್ಪಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಪಾವನ ಜೋಗಿಬೆಟ್ಟು, ಸಂಘದ ನಿರ್ದೇಶಕ ಬಾಬು ಅಜಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಹಿತ್ ಕುರಿಕ್ಕಾನ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕ್ರಿಕೆಟ್ ಪಂದ್ಯಾಟ, ಸಾಂಸ್ಕೃತಿಕ ಕಾರ್ಯಕ್ರಮ, ಆರೋಗ್ಯ ಮಾಹಿತಿ ಶಿಬಿರ, ಸಂಗೀತ ರಸಮಂಜರಿ, ನಡೆಯಿತು. ಸಂಜೆ ಶಾಸಕಿ ಕು. ಭಾಗೀರಥಿ ಮುರುಳ್ಯರವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಕ್ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯ.ಸ.ಸದಸ್ಯ ಪಿ.ಜಿ.ಎಸ್.ಎನ್. ಪ್ರಸಾದ್, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪು, ಬಾಳಿಲ ವಿದ್ಯಾಬೋಧಿನೀ ಎಜ್ಯುಕೇಶನಲ್ ಸೊಸೈಟಿ ಅಧ್ಯಕ್ಷ ಯು. ರಾಧಾಕೃಷ್ಣ ರಾವ್ ಮತ್ತು ಸಂಘದ ಅಧ್ಯಕ್ಷ ಕಾಂತು ಬಾಳಿಲ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಕಿಶನ್ ರಾವ್ ಬಾಳಿಲ, ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಬೆಳ್ಳಾರೆ ಮೆಸ್ಕಾಂ ಲೈನ್ ಮ್ಯಾನ್ ಮಂಜುನಾಥರನ್ನು ಅವರ ಮನೆಯಲ್ಲಿ ಸನ್ಮಾನಿಸಲಾಯಿತು. ಬಳಿಕ ಕಾಂತು ಬಿ ವಿರಚಿತ ಯಕ್ಷಗಾನ ಬಯಲಾಟ ಪುಂಡಿಪನವು ನಡೆಯಿತು.