ರೋಟರಿ ಆಂಗ್ಲ ಮಾದ್ಯಮ ಶಾಲೆ ಸುಳ್ಯ ಇಲ್ಲಿನ ೯ನೇ ತರಗತಿ ವಿದ್ಯಾರ್ಥಿನಿ ಕು.ವಂಶಿಕಾ ಎಸ್. ಅವರ ಬಹುಮುಖ ಪ್ರತಿಭೆಯನ್ನು ಗುರುತಿಸಿ ಧಾರವಾಡದ ಅಕ್ಷರದೀಪ ಫೌಂಡೇಶನ್ ಹಾಗೂ ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಧಾರವಾಡ – ಬೆಳಗಾವಿ ವತಿಯಿಂದ ಕರುಣಾಡ ಕಣ್ಮಣಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
ಧಾರವಾಡದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ನಡೆದ ಸಮಾರಂಭದಲ್ಲಿ ಕು.ವಂಶಿಕಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕು. ವಂಶಿಕಾ ಎಸ್. ಅವರು ಸುಳ್ಯ ತಾಲೂಕಿನ ಐವರ್ನಾಡಿನ ಸದಾನಂದ ಹಾಗೂ ಪರಿಮಳಾ ಸದಾನಂದ ಅವರ ಪುತ್ರಿ. ಬಹುಮುಖ ಪ್ರತಿಭೆ ವಂಶಿಕಾ ಅವರು ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಗುರು ವಿದ್ಯಾಶ್ರೀ ರಾಧಾಕೃಷ್ಣ ಅವರಲ್ಲಿ ಸೀನಿಯರ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಚಿತ್ರಕಲೆಯಲ್ಲೂ ಆಸಕ್ತಿ ಬೆಳೆಸಿಕೊಂಡ ಇವರು ಜೂನಿಯರ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡು, ಸೀನಿಯರ್ ಪರೀಕ್ಷೆಗೆ ಅಣಿಯಾಗುತ್ತಿದ್ದಾರೆ. ರಂಗೋಲಿ, ಛದ್ಮವೇಶ, ಕ್ರಾಫ್ಟ್ö, ಸಂಗೀತ, ನೃತ್ಯ ಮೊದಲಾದ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ವಂಶಿಕಾ ಹಲವು ಬಹುಮಾನಗಳನ್ನು ತನ್ನದಾಗಿಸಿಕೊಂಡಿರುವ ಬಾಲಕಲಾವಿದೆ. ಸ್ಕೌಟ್ಸ್ ಗೈಡ್ಸ್ನಲ್ಲಿಯೂ ಸಕ್ರಿಯರಾಗಿದ್ದುö, ಹಲವು ಬಹುಮಾನ ಗಳಿಸಿದ್ದಾರೆ.