ಸುಳ್ಯ ರೈತ ಉತ್ಪಾದಕ ಕಂಪೆನಿ ವತಿಯಿಂದ ಕೃಷಿ ಸಖೀ, ಕೃಷಿ ಉದ್ಯೋಗ ಸಖೀ ಮತ್ತು ಪಶು ಸಖೀಯರಿಗೆ “ಕೃಷಿ ಪೂರಕ ಮಾಹಿತಿ” ಕಾರ್ಯಕ್ರಮ ದಿನಾಂಕ 06-11-2023 ರಂದು ಎ.ಪಿ.ಎಂ.ಸಿ ಸಭಾಭವನದಲ್ಲಿ ನಡೆಯಿತು. ಸುಳ್ಯ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಮಾನ್ಯ ಶ್ರೀ ಗುರುಪ್ರಸಾದ್ ದೀಪಬೆಳಗಿಸಿ ಉದ್ಘಾಟಿಸಿ ಕೃಷಿ ಇಲಾಖೆಯ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿ ಸಂಸ್ಥೆಗೆ ಶುಭ ಹಾರೈಸಿದರು.
ಮುಖ್ಯ ಅತಿಥಿ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶ್ರೀಮತಿ ಸುಹಾನ ರವರು ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಮುಖ್ಯ ಅತಿಥಿ ಸಂಜೀವಿನಿ ವಿಭಾಗದ ಮುಖ್ಯಸ್ಥೆ ಶ್ರೀಮತಿ ಶ್ವೇತಾ ರವರು ಎನ್.ಆರ್ ಎಲ್.ಎಂ ಯೋಜನೆಯ ಕುರಿತು ಮಾಹಿತಿ ನೀಡಿದರು ಮತ್ತು ಈ ಕಾರ್ಯಕ್ರಮವನ್ನು ಹಮ್ಮಿಕೊಂಡ ಸುಳ್ಯ ರೈತ ಉತ್ಪಾದಕ ಸಂಸ್ಥೆಯನ್ನು ಅಭಿನಂದಿಸಿದರು.
ಸಂಪನ್ಮೂಲ ವ್ಯಕ್ತಿಯಾದ
ಶ್ರೀ ಗಣೇಶ್ ಪ್ರಾದೇಶಿಕ ವ್ಯವಸ್ಥಾಪಕರು ಸಮುನ್ನತಿ ಆಗ್ರೋ ಫೈನಾನ್ಸ್ ಲೀ. ರವರು ಸಾವಯವ ಗೊಬ್ಬರದ ಬಳಕೆ ಕುರಿತು ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ರೈತ ಉತ್ಪಾದಕ ಕಂಪೆನಿ ಅಧ್ಯಕ್ಷರಾದ ಶ್ರೀ ವೀರಪ್ಪಗೌಡ ಕಣ್ಕಲ್ ವಹಿಸಿದ್ದು ಎಫ್. ಪಿ. ಓ ದ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು ಮತ್ತು ಕಂಪೆನಿಯಿಂದ ರೈತರಿಗೆ ಸಿಗುವ ಸೌಲಭ್ಯಗಳನ್ನು ಕುರಿತು ತಿಳಿಸಿದರು.
ಸುಮಾರು ಅರುವತ್ತು ಜನ ಕೃಷಿ ಸಖೀ, ಕೃಷಿ ಉದ್ಯೋಗ ಸಖೀ ಮತ್ತು ಪಶು ಸಖೀಯರು ಭಾಗವಹಿಸಿದರು ಮತ್ತು ಕಂಪೆನಿಯ ನಿರ್ದೇಶಕರುಗಳು, ಕೃಷಿ ಇಲಾಖೆಯ ಸಿಬ್ಬಂದಿಗಳು ಮತ್ತು ತಾಲೂಕು ಪಂಚಾಯತಿಯ ಎನ್ ಆರ್ ಎಲ್ ಎಂ ನ ವಲಯ ಮೇಲ್ವಿಚಾರಕರಾದ ಮಹೇಶ್ ಬಿ ಉಪಸ್ಥಿತರಿದ್ದರು. ಸುಳ್ಯ ರೈತ ಉತ್ಪಾದಕ ಕಂಪನಿಯ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಶ್ರೀ ಹರೀಶ್ ಕೆ ಧನ್ಯವಾದಗಳು ನೀಡಿದರು.