ಅಪ್ರಾಪ್ತೆಯಾಗಿದ್ದಾಗ ದೈಹಿಕ ಸಂಪರ್ಕ‌ : ಮದುವೆಯಾಗಿ‌ ಜತೆಗಿದ್ದರು – ಇದೀಗ ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

0

ಪರಸ್ಪರ ಪ್ರೀತಿಸುತಿದ್ದ ಜೋಡಿ ಮದುವೆಗೆ ಮೊದಲೇ ದೈಹಿಕ ಸಂಪರ್ಕ‌ ಬೆಳೆಸಿದ ಪರಿಣಾಮ ಯುವತಿ ಗರ್ಭಿಣಿ ಯಾಗಿದ್ದು‌ ಬಳಿಕ ಅವರಿಬ್ಬರು‌ ಮದುವೆಯಾಗಿ ಜತೆಯಾಗಿದ್ದರೂ ಇದೀಗ ಯುವಕನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ.

ಬಳ್ಪದ ಯುವತಿ ಹಾಗೂ ಕಡಬ ನೆಕ್ಕಿಲದ ಯುವಕ ಪರಸ್ಪರ ಪ್ರೀತಿಸುತಿದ್ದರೆಂದೂ ಅವರಿಬ್ಬರು ದೈಹಿಕ ಸಂಪರ್ಕ ಬೆಳೆಸಿದರು. ಈ ವೇಳೆ ಯುವತಿಗೆ 18 ವರ್ಷ ತುಂಬಿರಲಿಲ್ಲವೆಂದು ತಿಳಿದುಬಂದಿದೆ.

ಯುವತಿ ಗರ್ಭಿಣಿಯಾಗಿದ್ದು‌ ಬಳಿಕ ಆ ಜೋಡಿ‌ ಮದುವೆಯಾಗಿತ್ತು. ಕೆಲ ದಿನಗಳ ಹಿಂದೆ ಯುವತಿ ಪರೀಕ್ಷೆಗಾಗಿ ಆಸ್ಪತ್ರೆಗೆ ಹೋದಾಗ ಆಕೆಯ ವಯಸ್ಸಿನ ಕಾರಣದಿಂದ ಬಳಿಕ ಪ್ರಕರಣ ಪೋಲೀಸ್ ಠಾಣೆ ಮೆಟ್ಟಿಲೇರಿತೆಂದೂ, ಇದೀಗ ಪುತ್ತೂರು‌ ಮಹಿಳಾ ಪೋಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ