ನಾಳೆ (ನ.8)ಯಿಂದ ಪಿಡಿಒಗಳ ಅಸಹಕಾರ ಚಳವಳಿ

0

ವಿವಿಧ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರದ
ನಿರ್ಲಕ್ಷ್ಯವಹಿಸಿರುವುದನ್ನು ಖಂಡಿಸಿ ನ.8ರಿಂದ ಕೆಲಸ ನಿರ್ವಹಿಸದೇ ಅಸಹಕಾರ ಚಳವಳಿ ನಡೆಸುವುದಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘ ಹೇಳಿದೆ. ಈ ಕುರಿತು ಸುಳ್ಯದ ಪಿಡಿಒ ಗಳ ಸಂಘದ ಪದಾಧಿಕಾರಿಗಳು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದೆ ಸಲ್ಲಿಸಿದೆ.

ಚಳವಳಿಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಪಿಡಿಒಗಳ ರಾಜ್ಯ ಸಂಘ ಪತ್ರ ಬರೆದಿದೆ. ಈ ಚಳವಳಿ ಸಂದರ್ಭದಲ್ಲಿ ಇಲಾಖೆಗೆ ಸಂಬಂಧಿಸಿದ ಎಲ್ಲ ಆನ್‌ಲೈನ್ ಸೇವೆಗಳನ್ನು ಸ್ಥಗಿತಗೊಳಿಸುತ್ತೇವೆ. ಮೇಲಧಿಕಾರಿಗಳು ಕರೆಯುವ ಸಭೆಗೂ ಗೈರು ಹಾಜರಾಗುತ್ತೇವೆ. ಆದರೆ ಜನರ ಮೂಲಭೂತ ಸೇವೆಗಳನ್ನು ಮಾತ್ರ ನೀಡುತ್ತೇವೆ.

ಸೆ.5 ರಂದು ಸಭೆ ನಡೆಸಿ ಜೇಷ್ಠತಾ ಪಟ್ಟಿ ಪ್ರಕಟಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದು, ಈವರೆಗೂ ಬೇಡಿಕೆ ಈಡೇರಿಲ್ಲ. ಹಾಗಾಗಿ ತಾವು ಮೊದಲ ಹಂತದಲ್ಲಿ ಅಸಹಕಾರ ಚಳವಳಿ ನಡೆಸಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.
ಈ ಬಾರಿಯೂ ತಮ್ಮ ಬೇಡಿಕೆಗೆ ಸ್ಪಂದಿಸದೇ ಇದ್ದರೆ ರಾಜ್ಯಾದ್ಯಂತ ಎಲ್ಲ ಜಿ.ಪಂಗಳ ಮುಂದೆ ಅನಿರ್ದಿಷ್ಟವಧಿ ಪ್ರತಿಭಟನೆ, ಬೆಂಗಳೂರು ಚಲೋಗೆ ನಡೆಸಲೂ ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.

ಬೇಡಿಕೆಗಳೇನು? : ಪಿಡಿಒಗಳ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಬೇಕು. ತಾಲೂಕು ಪಂಚಾಯಿತಿಗಳಲ್ಲಿ ಖಾಲಿ ಇರುವ ಸಹಾಯಕ ನಿರ್ದೇಶಕ ಹುದ್ದೆಗೆ ಬಡ್ತಿ ನೀಡಬೇಕು. ಎಲ್ಲ ಪಿಡಿಒಗಳ ಹುದ್ದೆಗಳನ್ನು ಬಿ ವೃಂದಕ್ಕೆ ಮೇಲ್ದರ್ಜೆಗೇರಿಸಬೇಕು. ಅವಧಿಗೂ ಮುನ್ನ ವರ್ಗಾವಣೆ ಮಾಡಬಾರದು ಹಾಗೂ ವೇತನ ಬಿಡುಗಡೆ ಮಾಡಬೇಕು ಎಂದು‌ ಪ್ರಮುಖ‌ಬೇಡಿಕೆಗಳು.

ಸುಳ್ಯದಲ್ಲಿ ಮನವಿ ನೀಡುವ ಸಂದರ್ಭ ತಾಲೂಕು ಸಂಘದ ಅಧ್ಯಕ್ಷ ರವಿಚಂದ್ರ ಅಕ್ಕಪ್ಪಾಡಿ, ಧನಪತಿ ಗುತ್ತಿಗಾರು, ಜಯಪ್ರಕಾಶ್ ಅರಂತೋಡು, ರಾಜಲಕ್ಷ್ಮಿ ಸುಳ್ಯ, ಪ್ರವೀಣ್ ಕುಮಾರ್ ಕೊಡಿಯಾಲ ಇದ್ದರು. ತಾ.ಪಂ. ಮ್ಯಾನೇಜರ್ ಹರೀಶ್‌ ಮನವಿ ಸ್ವೀಕಾರ ‌ಮಾಡಿದರು.