ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಲಂಚ ಭ್ರಷ್ಟಾಚಾರದ ಕುರಿತು ಜಾಗೃತಿ ಸಪ್ತಾಹ ಹಾಗೂ ಮಳೆ ನೀರು ಕೊಯ್ಲಿನ ಮಾಹಿತಿ ಕಾರ್ಯಗಾರ ಹಾಗೂ ಪ್ರಾತ್ಯಕ್ಷಿಕೆ

0

ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಎನ್. ಎಸ್. ಎಸ್ ವಿದ್ಯಾರ್ಥಿಗಳಿಗೆ ಲಂಚ ಭ್ರಷ್ಟಾಚಾರ ನಿರ್ಮೂಲನೆಯ ಸುದ್ದಿಯ ಜಾಗೃತಿ ಆಂದೋಲನದ ಬಗ್ಗೆ ಹಾಗೂ ಮಳೆ ಕೊಯ್ಲು ನೀರು ಬಳಕೆಯ ಕುರಿತು ಮಾಹಿತಿ ಕಾರ್ಯಗಾರ ಹಾಗೂ ಪ್ರಾತ್ಯಕ್ಷಿಕೆಯನ್ನು ಇಂದು ಕಾಲೇಜಿನ ಆವರಣದಲ್ಲಿ ನಡೆಸಲಾಯಿತು.

ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ರವರು ಲಂಚ ಭ್ರಷ್ಟಾಚಾರ ಸುದ್ದಿಯಜನಾಂದೋಲನದ ಕುರಿತು ಮಾತನಾಡಿ “ಲಂಚ ಎಂದರೆ ದರೋಡೆ ಭ್ರಷ್ಟಾಚಾರ ಎಂದರೆ ದೇಶ ದ್ರೋಹ ,ಉತ್ತಮ ಸೇವೆಗೆ ಪುರಸ್ಕಾರ ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ ಎಂಬ ಜಾಗೃತಿಯ ಸಂದೇಶದ ಬಗ್ಗೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಮಳೆ ಕೊಯ್ಲು ಶುದ್ಧ ಮಳೆ ನೀರನ್ನು ಬಳಸುವುದರಿಂದ ಆಗುವ ಪ್ರಯೋಜನದ ಕುರಿತು ಮಾಹಿತಿ ನೀಡಿದರು. ಬಳಿಕ ವಿದ್ಯಾರ್ಥಿಗಳಿಗೆ ಮಳೆ ಕೊಯ್ಲಿನ ನೀರು ಸಂಗ್ರಹದ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ಪ್ರದರ್ಶಿಸಲಾಯಿತು.
ಸುದ್ದಿ ಪ್ರದಾನ ವರದಿಗಾರ ಹರೀಶ್ ಬಂಟ್ವಾಳ್ ಪ್ರಾಸ್ತಾವಿಕ ಮಾತನಾಡಿದರು.


ಕಾಲೇಜು ಪ್ರಾಂಶುಪಾಲ ರುದ್ರಕುಮಾರ್ ರವರು ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್.ಘಟಕಾಧಿಕಾರಿಗಳಾದ ಸಂಜೀವ ಕುದ್ಪಾಜೆ, ಶ್ರೀಮತಿ ಚಿತ್ರಲೇಖ, ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ, ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿ ನಾಯಕ ಪ್ರಸಾದ್, ಕೀರ್ತನ್, ಕು.ದೀಪ್ತಿ, ಕು.ರಕ್ಷಿತ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕು. ಅನ್ವಯ ಕಾರ್ಯಕ್ರಮ ನಿರೂಪಿಸಿದರು.