ಗುತ್ತಿಗಾರು :ದಿ.ವೈ.ಕೆ.ಮಾಸ್ತರ್‌ರ ವರ ಮನೆಯಲ್ಲಿ ಸಾಧಕ ಮೊಮ್ಮಕ್ಕಳಿಗೆ ಸನ್ಮಾನ ಕಾರ್ಯಕ್ರಮ

0

ಗುತ್ತಿಗಾರಿನ ದಿ.ವೈ.ಕೆ.ಮಾಸ್ತರ್‌ರವರ ಮನೆಯಲ್ಲಿ ಮೊಮ್ಮಕ್ಕಳಾದ ಡಾ.ಕಾರ್ತಿಕ್ ಕೆ.ಎಸ್. ಮತ್ತು ಮಧು ಎಂ. ಇವರನ್ನು ಇವರುಗಳ ಸಾಧನೆಗಾಗಿ ಅಜ್ಜಿ ಲಕ್ಷ್ಮಿ ವೈ.ಕೆ. ರವರು ನ.12ರಂದು ದೀಪಾವಳಿಯ ಶುಭ ದಿನದಂದು ಸನ್ಮಾನಿಸಿ ಆಶೀರ್ವದಿಸಿದರು.

ಡಾ.ಕಾರ್ತಿಕ್ ಕೆ.ಎಸ್ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಸರ್ಜಿಕಲ್ ಆಂಕಾಲಜಿಸ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇತ್ತೀಚೆಗೆ ಇಟಲಿಯ ಫ್ಲೋರೆನ್ಸ್‌ನಲ್ಲಿ ನಡೆದ ಯುರೋಪಿಯನ್ ಬೋರ್ಡ್ ಆಫ್ ಸರ್ಜರಿ ಅರ್ಹತಾ ಪರೀಕ್ಷೆ ಉತ್ತೀರ್ಣರಾಗಿ (FEBS ) ಫೆಲೋ ಆಫ್ ಯುರೋಪಿಯನ್ ಬೋರ್ಡ್ ಆಫ್ ಸರ್ಜರಿಗೆ ಆಯ್ಕೆಯಾಗಿದ್ದಾರೆ. ಇವರು ಸಂಜೀವ ಕತ್ಲಡ್ಕ ಮತ್ತು ಹೇಮಲತಾ ದಂಪತಿಗಳ ಪುತ್ರ. ಡಾ.ಮಧು ಎಂ. ಹಾಸನದ ಎಸ್.ಡಿ.ಎಂ ಆಯುರ್ವೇದಿಕ್ ಮಡಿಕಲ್ ಕಾಲೇಜಿನಲ್ಲಿ ಫ್ರೋಫೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಪ್ರಸೂತಿಶಾಸ್ತ್ರ ವಿಭಾಗದಲ್ಲಿ ಸಂಶೋಧನಾ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇವರು ಮೋಹನ್‌ದಾಸ್ ಮುದ್ಯ ಮತ್ತು ವೈ.ಕೆ.ಮಾಲತಿ ದಂಪತಿಗಳ ಪುತ್ರಿ. ಸಮಾರಂಭದಲ್ಲಿ ಮನೆಯ ಮಕ್ಕಳು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳು ಉಪಸ್ಥಿತರಿದ್ದು ಶುಭಹಾರೈಸಿದರು.