ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ದಾಖಲಿಸಿಕೊಂಡ ಸಾನ್ವಿ ದೊಡ್ಡಮನೆ

0

ಅತೀ ಸಣ್ಣ ಪ್ರಾಯದಲ್ಲಿ ವಿಭಿನ್ನ ಯೋಗದ ಮೂಲಕ ಹಲವಾರು ಚಿನ್ನ, ಬೆಳ್ಳಿ, ಕಂಚಿನ ಪದಕಗಳನ್ನು ಮೂಡಿಗೇರಿಸಿಕೊಂಡ ಪಂಜದ ಸಾನ್ವಿ ದೊಡ್ಡಮನೆ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ದಾಖಲಿಸಿಕೊಂಡಿದ್ದಾರೆ. ಇವರು ಸೈoಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದಾರೆ. ಗುರುಗಳಾದ ಶರತ್ ಮರ್ಗಿಲಡ್ಕ ನಿರಂತರ ಯೋಗ ಕೇಂದ್ರ ಪಂಜ (ದಕ್ಷಿಣ ಕನ್ನಡ ) ಇವರಿಂದ ಯೋಗಾಭ್ಯಾಸವನ್ನು 3 ವರ್ಷದಿಂದ ಪಡೆಯುತ್ತಿದ್ದಾರೆ. ಇವರು ಶ್ರೀ ಮುಕಾಂಬಿಕಾ ಮಾರುತಿ ಆಟೋ ವರ್ಕ್ಸ್ ಕಡಬ ಮಾಲಕರಾದ ನಿತ್ಯಾನಂದ ದೊಡ್ಡಮನೆ ಹಾಗೂ ಸೀತಾಲಕ್ಷ್ಮಿ ದಂಪತಿಯ ಪುತ್ರಿ.