ಸುಳ್ಯದ ಚಂದನ ಸಾಹಿತ್ಯ ವೇದಿಕೆಯ ವತಿಯಿಂದ ಕೆ.ಎಸ್. ಆರ್. ಟಿ.ಸಿ. ಬಸ್ ಸ್ಟಾಂಡ್ ಬಳಿ ಇರುವ ಶಾರದಾ ವಿದ್ಯಾಲಯದಲ್ಲಿ ಇತ್ತೀಚಿಗೆ ದೀಪಾವಳಿ ಕವಿಗೋಷ್ಠಿ ಮತ್ತು ಸಾಹಿತ್ಯ ಕೃತಿ ಬಿಡುಗಡೆ ಕಾರ್ಯಕ್ರಮ ಜರುಗಿತು. ಆರಂಭದಲ್ಲಿ ಕಾರ್ಯಕ್ರಮದ ಗಣ್ಯರನ್ನು ಮತ್ತು ಕವಿಗಳನ್ನು ಬಸ್ ನಿಲ್ದಾಣದಿಂದ ಮೆರವಣಿಗೆ ಮೂಲಕ ವಿದ್ಯಾಲಯಕ್ಕೆ ಬರಮಾಡಿಕೊಳ್ಳಲಾಯಿತು. ಸಭಾಧ್ಯಕ್ಷತೆಯನ್ನು ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ, ಸಾಹಿತಿ ಮತ್ತು ಜ್ಯೋತಿಷ್ಯ ಎಚ್. ಭೀಮರಾವ್ ವಾಷ್ಠರ್ ಅವರು ವಹಿಸಿದ್ದರು. ಶಾರದಾ ವಿದ್ಯಾಲಯದ ಪ್ರಾಂಶುಪಾಲೆ ಶಾರದಾ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ದೀಪಾವಳಿ ಹಬ್ಬದ ಮಹತ್ವ ಮತ್ತು ಸಾಹಿತ್ಯ ವಿಚಾರವಾಗಿ ಮಾತಾಡಿದರು. ದೀಪಾವಳಿ ಕವಿಗೋಷ್ಠಿ ಅಧ್ಯಕ್ಷತೆಯನ್ನು ಪುತ್ತೂರಿನ ಹಿರಿಯ ಕವಿ ನಾರಾಯಣ ರೈ ಕುಕ್ಕುವಳ್ಳಿ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬಿ ಕೆ ಉಮಾದೇವಿ, ನೃತ್ಯ ನಿರ್ದೇಶಕ ವಸಂತ್ ಆಚಾರ್ಯ ಕಾಯರ್ತೋಡಿ, ಯುವಕವಿ ಬಿ ಕೆ ಉಮೇಶ್ ಆಚಾರ್ಯ ಜಟ್ಟಿಪಳ್ಳ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಯುವಕವಿ ಕುಸುಮಾಕರ ಅಂಬೆಕಲ್ಲು ಅವರ ಅರಳು ಮಲ್ಲಿಗೆ ಕವನ ಸಂಕಲನ ಬಿಡುಗಡೆ ಮಾಡಲಾಯಿತು. ನಂತರ ನಡೆದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅನುರಾಧ ಶಿವಪ್ರಕಾಶ್ ಸುಳ್ಯ, ಅನುರಾಧಾ ಎ ಆರ್ ನೆಟ್ಟಾರು, ಪ್ರಮೀಳಾ ರಾಜ್ ಐವರ್ನಾಡು, ಪೂರ್ಣಿಮಾ ತೋಟಪ್ಪಾಡಿ, ಕೇಶವ ನೆಲ್ಯಾಡಿ, ಚಂದ್ರಹಾಸ ಕುಂಬಾರ ಬಂದಾರು, ಸುರೇಶ ಕುಮಾರ್ ಚಾರ್ವಾಕ, ಸುಮಂಗಲ ಲಕ್ಷ್ಮಣ್ ಕೊಳಿವಾಡ, ಮಲ್ಲಿಕಾ ಜೆ ರೈ ಪುತ್ತೂರು, ತೇಜೇಶ್ವರ್ ಕುಂದಲ್ಪಾಡಿ, ಶಾರದಾ ವಿದ್ಯಾಲಯದ ವಿದ್ಯಾರ್ಥಿಗಳಾದ ಜಯಶ್ರೀ, ಸುಶ್ಮಿತಾ, ಶರಣ್ಯ, ಗಾಯಿತ್ರಿ, ನಯನ, ಸ್ವಾತಿ, ಆಫ್ಸಲ್, ಶಿಕ್ಷಕಿ ಮೈತ್ರಿ ಇನ್ನಿತರರು ಭಾಗವಹಿಸಿದ್ದರು. ಭಾಗವಹಿಸಿದ ಎಲ್ಲರಿಗೂ ಪ್ರಶಂಸನಾ ಪತ್ರದ ಜೊತೆಗೆ ಸಾಹಿತ್ಯ ಕೃತಿ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪೂರ್ಣಿಮಾ ತೋಟಪ್ಪಾಡಿ ಸ್ವಾಗತಿಸಿದರು. ಪ್ರಮೀಳಾ ರಾಜ್ ಐವರ್ನಾಡು ವಂದಿಸಿದರು. ಶಾರದಾ ವಿದ್ಯಾಲಯದ ಶಿಕ್ಷಕಿ ಹೇಮಾ ನಿರೂಪಿಸಿದರು.