ನಿವೃತ್ತ ಉಪತಹಶೀಲ್ದಾರ್, ಬಳ್ಪ ಗ್ರಾ.ಪಂ. ಮಾಜಿ ಅಧ್ಯಕ್ಷ ಭಾಸ್ಕರ ಪೂಜಾರಿ ಪಡಿಕ್ಕಿಲಾಯ ನಿಧನ

0

ಬಳ್ಪ ಗ್ರಾ.ಪಂ. ಮಾಜಿ‌ ಅಧ್ಯಕ್ಷ, ನಿವೃತ್ತ ಉಪತಹಶೀಲ್ದಾರ್ ಭಾಸ್ಕರ ಪೂಜಾರಿ ಪಡಿಕ್ಕಿಲಾಯ‌ ಅಸೌಖ್ಯದಿಂದ ನ. 27ರಂದು ನಿಧನರಾದರು. ಇವರಿಗೆ 81 ವರ್ಷ ವಯಸ್ಸಾಗಿತ್ತು. ಇವರು ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ಊರಿನ ಎಲ್ಲಾ ಕಾರ್ಯಗಳಲ್ಲೂ ಸಕ್ರೀಯರಾಗಿದ್ದರು. ಮೃತರು ಪತ್ನಿ ಶ್ರೀಮತಿ ಸುಂದರಿ, ಪುತ್ರ ಕರ್ನಾಟಕ ಬ್ಯಾಂಕ್ ನ ಸುಳ್ಯ ಶಾಖೆಯ ಉದ್ಯೋಗಿ ನಾಗೇಶ್ ಪಡಿಕ್ಕಿಲಾಯ, ಪುತ್ರಿ ಶ್ರೀಮತಿ ಕಸ್ತೂರಿ ಶಾಂತಪ್ಪ ಪೂಜಾರಿ ಪುತ್ತೂರು, ಸಹೋದರ ಮೋನಪ್ಪ ಪೂಜಾರಿ ಪಾಂಗಲಾಯ, ಪುತ್ತೂರು ಸೇರಿದಂತೆ ಸೊಸೆ, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.