” ನಿನ್ನೆ ರಾತ್ರಿ ನಾನು ಮದ್ಯಪಾನ ಮಾಡಿರಲಿಲ್ಲ. ಚಹಾ ಕುಡಿಯಲೆಂದು ಅರಂಬೂರಿನಲ್ಲಿರುವ ಕಾಫಿ ಡೇ ಗೆ ಹೋಗಿದ್ದೆ ಅಷ್ಟೆ “ಎಂದು ಸುಳ್ಯ ಎ.ಪಿ.ಎಂ.ಸಿ. ಕಾರ್ಯದರ್ಶಿ ನವೀನ್ ಕುಮಾರ್ ಹೇಳಿದ್ದಾರೆ.
ಕಾಫಿ ಡೇಯಿಂದ ಚಹಾ ಕುಡಿದು ಇಲಾಖಾ ವಾಹನದಲ್ಲಿ ಹಿಂತಿರುಗಿ ಬರುವಾಗ ನಾಲ್ಕೈದು ಮಂದಿ ವಾಹನವನ್ನು ತಡೆದು ನಿಲ್ಲಿಸಿ, ” ನೀವು ಯಾರು ? ಹೀಗ್ಯಾಕೆ ಅಪಘಾತವಾಗುವ ರೀತಿಯಲ್ಲಿ ವಾಹನ ಚಲಾಯಿಸುತ್ತಿದ್ದೀರಿ ?” ಎಂದು ಪ್ರಶ್ನಿಸಿ ತರಾಟೆಗೆತ್ತಿಕೊಂಡರು. ನಾನು ಮದ್ಯಪಾನ ಮಾಡಿರಲಿಲ್ಲ. ಯಾವ ವಾಹನಕ್ಕೂ ಗುದ್ದಿರಲಿಲ್ಲ. ನಾನು ನನ್ನ ಪರಿಚಯ ಹೇಳಿಕೊಂಡು, ಅವರು ಹೆಚ್ಚು ಜನ ಇದ್ದುದರಿಂದ ತಕರಾರು ಯಾಕೆಂಬ ಕಾರಣಕ್ಕಾಗಿ ಕ್ಷಮೆ ಕೇಳಿದೆ. ನಾನು ಎ.ಪಿ.ಎಂ.ಸಿ. ಶುಲ್ಕ ಪಾವತಿಸದ ವ್ಯಾಪಾರಸ್ಥರಿಗೆ ನೋಟೀಸ್ ಮಾಡಿದ್ದೆ. ಅದಕ್ಕಾಗಿ ಈ ರೀತಿ ನನ್ನನ್ನು ತಡೆದು ಪ್ರಶ್ನಿಸಿರಬಹುದೆಂದು ಅನಿಸುತ್ತಿದೆ ” ಎಂದು ಸುದ್ದಿಯೊಂದಿಗೆ ಹೇಳಿದ್ದಾರೆ.