ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಕನಕದಾಸ ಜಯಂತಿಯ ಆಚರಣೆ

0

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನ.30ರಂದು ಕನಕದಾಸ ಜಯಂತಿಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ಅ ಸ್ನೇಹ ಸಂಸ್ಥೆಯ ಶಿಕ್ಷಕ ದೇವಿಪ್ರಸಾದ್ ಜಿ ಸಿ ಇವರು ಕನಕದಾಸರ ಕುರಿತು ವಿದ್ಯಾರ್ಥಿಗಳಿಗೆ ವಿವರವನ್ನು ನೀಡಿದರು.
ಕನಕದಾಸರ ‘ಉಗಾಭೋಗ’ದೊಂದಿಗೆ ಮಾತನ್ನು ಆರಂಭಿಸಿದ ಅವರು “ಜ್ಞಾನವು ಕುಲ, ಜಾತಿ, ಹುಟ್ಟಿನಲ್ಲಿ ಅಡಗಿಲ್ಲ. ಜ್ಞಾನಕ್ಕೆ ಪ್ರಯತ್ನ ಅಗತ್ಯ” ಎಂದರು.

ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ‌ವಹಿಸಿದ್ದರು.

ಏಳನೇ ತರಗತಿಯ ವಿದ್ಯಾರ್ಥಿಯಾದ ಅಪ್ರಮೇಯ ಆರ್ ಯು ಇವರು ಕನಕದಾಸರ ಕೀರ್ತನೆಯಾದ ‘ಗೋವಿಂದ ಹರಿ ಗೋವಿಂದ’ ಎಂಬ ಕೀರ್ತನೆಯನ್ನು ಹಾಡಿದರು.


ಕಾರ್ಯಕ್ರಮವನ್ನು 10ನೇ ತರಗತಿ ವಿದ್ಯಾರ್ಥಿನಿಯರಾದ ಅಶ್ವತಿ ಎ ಕೆ ಯವರು ಸ್ವಾಗತಿಸಿ, ಶ್ರೀಶ ಪಿ ವಿ ಅವರು ವಂದಿಸಿ, ಜ್ಞಾನವಿ ಪಿ ಜೆ ಅವರು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.