ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ

0

ಬೆಳ್ಳಾರೆ ಕೆಪಿಎಸ್ ನ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ವಿಭಾಗದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ನ.28 ಮತ್ತು ನ.29 ರಂದು ನಡೆಯಿತು. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬೆಳ್ಳಾರೆ ಪಂಚಾಯತ್ ಅಧ್ಯಕ್ಷರಾದ ನಮಿತಾ ಎಲ್ ರೈ ಅವರು ಅಧ್ಯಕ್ಷತೆ ವಹಿಸಿದರು. ಅತಿಥಿಗಳಾಗಿ ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯರಾದ ಅನಿಲ್ ರೈ ಚಾವಡಿಬಾಗಿಲು ಶುಭ ಹಾರೈಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್ ಬಿ.ಇ. ಯವರು ಕಾರ್ಯಕ್ರಮದ ಕುರಿತು ಸಂಸ್ಥೆಯ ಬಗ್ಗೆ ಅಭಿನಂದನಾ ಮಾತುಗಳನ್ನಾಡಿ ಶುಭಹಾರೈಸಿದರು. ಪ್ರಾಂಶುಪಾಲರಾದ ಜನಾರ್ಧನ ಕೆ ಎನ್ ಧ್ವಜಾರೋಹಣಗೈದರು.
ಹಾಗೂ ಪದವಿಪೂರ್ವ ವಿಭಾಗದ ವಾರ್ಷಿಕ ವರದಿ ವಾಚಿಸಿದರು. ವೇದಿಕೆಯಲ್ಲಿ ಸಂಸ್ಥೆಯ ನಿಕಟಪೂರ್ವ ಪ್ರಾಂಶುಪಾಲರಾಗಿ ಪ್ರಭಾರ ವಹಿಸಿದ್ದ ವಿಶ್ವನಾಥ ಗೌಡ ಪಿ, ಉಪಪ್ರಾಂಶುಪಾಲರಾದ ಉಮಾಕುಮಾರಿ, ಮುಖ್ಯ ಶಿಕ್ಷಕರಾದ ಮಾಯಿಲಪ್ಪ ಜಿ. ಬೆಳ್ಳಾರೆ ಗ್ರಾಮ ಪಂಚಾಯಿತಿಯ ಸದಸ್ಯರು, ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಶ್ರೀನಾಥ್ ರೈ ಬಾಳಿಲ, ಎಸ್.ಡಿ.ಎಂ.ಸಿ. ಸದಸ್ಯರು, ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು.


ಹುತಾತ್ಮ ಯೋಧ ಕ್ಯಾಪ್ಟನ್ ಪ್ರಾಂಜಲ್ ಇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನ ಪ್ರಾರ್ಥನೆಯೊಂದಿಗೆ ನುಡಿನಮನ ನಡೆಯಿತು.
ಪ್ರಾಂಶುಪಾಲರಾದ ಪ್ರಭಾರ ವಹಿಸಿದ್ದ ವಿಶ್ವನಾಥ ಗೌಡ ಪಿ,
ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲು ಆಯ್ಕೆಯಾದ ಕಿಶನ್ ದ್ರಾವಿಡ್ ಬಿ.ಎಸ್. ಹಾಗೂ ಹೇಮಂತ್ ಕೆ ವಿ, ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿದ ದೈ.ಶಿ.ಶಿಕ್ಷಕರಾದ ಪುಷ್ಪಾವತಿ, ಕೋಚ್ ಗಳಾದ ಶ್ರೇಯಸ್ ಹಾಗೂ ವೀರನಾಥ್ ಇವರನ್ನು ಸನ್ಮಾನಿಸಲಾಯಿತು.
ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ತೆರಳಿದ ಹಾಗೂ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಎಲ್ಲಾ ಮೂರು ವಿಭಾಗದ ಅತಿಥಿ ಶಿಕ್ಷಕರಿಗೆ, ಅಡುಗೆ ಸಿಬ್ಬಂದಿಗಳಿಗೆ, ಆಯಾರವರಿಗೆ, ಸ್ವಚ್ಛತಾಗಾರರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವಿವಿಧ ಸ್ಪರ್ಧಾ ಸ್ಪರ್ಧಾವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪೋಷಕರಿಗೆ, ಶಿಕ್ಷಕರರಿಗೆ ನಡೆಸಲಾದ ಕ್ರೀಡಾಕೂಟ ವಿಜೇತರಿಗೂ ಬಹುಮಾನ ನೀಡಲಾಯಿತು.
ಮಾಸ್ತಿಕಟ್ಟೆ , ಬೆಳ್ಳಾರೆ ಅಂಗನವಾಡಿ ಪುಟಾಣಿಗಳು ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ ನಡೆಯಿತು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ವತಿಯಿಂದ ತರಬೇತಿ ಪಡೆದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ಸುದರ್ಶನ ವಿಜಯ ಮಕ್ಕಳ ಯಕ್ಷಗಾನ ಪ್ರದರ್ಶನ ವಿಶೇಷ ವಾಗಿತ್ತು.
2 ದಿನ ನಡೆದ ಕಾರ್ಯಕ್ರಮದಲ್ಲಿ 1500ವಿದ್ಯಾರ್ಥಿಗಳು, ಅವರ ಪೋಷಕರು , ಶಾಲಾ ಅಭಿಮಾನಿಗಳು ಭಾಗಿಯಾದರು.