ಕುಂಚಡ್ಕ ಐನ್ ಮನೆಯಲ್ಲಿ ಶ್ರೀ ಮಹಾಲಕ್ಷ್ಮಿ ಪೂಜೆ ಹಾಗೂ ವೆಂಕಟರಮಣ ದೇವರ ಹರಿ ಸೇವೆ

0

ಆಲೆಟ್ಟಿ ಗ್ರಾಮದ ಪ್ರತಿಷ್ಠಿತ ಕುಂಚಡ್ಕ ಮನೆತನದ ಐನ್ ಮನೆಯಲ್ಲಿ ಡಿ.3 ರಿಂದ 5 ರ ತನಕ ಶ್ರೀ ದೈವಗಳ ನಡಾವಳಿಯು ನಡೆಯಲಿದ್ದು ಇಂದು ಬೆಳಗ್ಗೆ ಶ್ರೀ ಮಹಾಲಕ್ಷ್ಮಿ ಪೂಜೆಯು ಹಾಗೂ ಶ್ರೀ ವೆಂಕಟರಮಣ ದೇವರ ಹರಿಸೇವೆಯು ನಡೆಯಿತು. ಪೂರ್ವಭಾವಿಯಾಗಿ
ಡಿ.2 ರಂದು ರಾತ್ರಿ ಕುಂಚಡ್ಕ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಕೈವೀದು ನಡೆಯಿತು.

ಶ್ರೀ ಮಹಾಲಕ್ಷ್ಮಿ ದೇವರ ಪೂಜೆಯು ನಡೆದು ಪ್ರಸಾದ ವಿತರಣೆಯಾಯಿತು.
ಬಳಿಕ ಶ್ರೀವೆಂಕಟರಮಣ ದೇವರ ಹರಿಸೇವೆಯಾಗಿ ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆಯು ನೆರವೇರಿತು.
ಈ ಸಂದರ್ಭದಲ್ಲಿ ಕುಟುಂಬದ ಯಜಮಾನರು ಹಾಗೂ ಆಡಳಿತ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಕುಟುಂಬದ ಹಿರಿಯ ಕಿರಿಯ ಸದಸ್ಯರು ಭಾಗವಹಿಸಿದರು. ಆಗಮಿಸಿದ ಎಲ್ಲರನ್ನೂ ಕುಟುಂಬಸ್ಥರು ಸ್ವಾಗತಿಸಿದರು.