ಡಿ.19 : ತೆಕ್ಕಿಲ್ ಹೆಚ್.ಪಿ. ಗ್ಯಾಸ್ ಏಜೆನ್ಸಿ ಆಶ್ರಯದಲ್ಲಿ ಪ್ರದಾನಮಂತ್ರಿ ಉಜ್ವಲ ಯೋಜನೆಯ ಉಚಿತ ಗ್ಯಾಸ್ ವಿತರಣೆ

0

ಅರಂತೋಡಿನ ತೆಕ್ಕಿಲ್ ಹೆಚ್.ಪಿ. ಗ್ಯಾಸ್ ಏಜೆನ್ಸಿ ಇದರ ಆಶ್ರಯದಲ್ಲಿ ಡಿಸೆಂಬರ್ 19 ರಂದು ಪ್ರಧಾನಮತ್ರಿ ಉಜ್ವಲ ಯೋಜನೆಯಡಿಯಲ್ಲಿ ಆಯ್ಕೆಯಾದ ಬಿ.ಪಿ.ಎಲ್ ಕಾರ್ಡ್ ದಾರರಿಗೆ ಉಚಿತ ಗ್ಯಾಸ್ ಸಂಪರ್ಕ ವಿತರಣಾ ಸಮಾರಂಭವು ಅರಂತೋಡು ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರಿ ಸಂಘದ ಸಿರಿಸೌಧ ಸಭಾಂಗಣದಲ್ಲಿ ನಡೆಯಲಿದೆ ಎಂದು ತೆಕ್ಕಿಲ್ ಹೆಚ್. ಪಿ. ಗ್ಯಾಸ್ ವಿತರಣಾ ಸಂಸ್ಥೆಯ ಅಶ್ರಫ್ ಗುಂಡಿ ಹೇಳಿದರು.

ಡಿ.16 ರಂದು‌ ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು “ಈಗಾಗಲೇ 126 ಮಂದಿ‌ ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಅರ್ಜಿ ಸಲ್ಲಿಸಲು ಅವಕಾಶ ಇದೆ. ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಂಪರ್ಕವನ್ನು ಸುಳ್ಯ ವಿಧಾನ ಸಭಾಕ್ಷೇತ್ರದ ಶಾಸಕಿ ಕು| ಭಾಗಿರಥಿ ಮುರುಳ್ಯರವರು ವಿತರಣೆ ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ತೆಕ್ಕಿಲ್ ಹೆಚ್.ಪಿ ಗ್ಯಾಸ್ ಏಜೆನ್ಸಿಯ ಮಾಲಕರಾದ ಟಿ.ಎಂ ಶಹೀದ್ ತೆಕ್ಕಿಲ್ ವಹಿಸಲಿದ್ದಾರೆ. ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್, ಅರಂತೋಡು ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಗೌರವ ಉಪಸ್ಥಿತಿಯಾಗಿ ಆಗಮಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಅರಂತೊಡು ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿಮೇಲು ಸಂಪಾಜೆ, ರಮಾದೇವಿ ಕಳಗಿ ಕೊಡಗು ಸಂಪಾಜೆ, ಗೀತಾ ಬಳ್ಳಕಾನ ಮರ್ಕಂಜ, ಚಂದ್ರಕಲಾ ಪೆರಾಜೆ, ತೀರ್ಥರಾಮ ಚೆಂಬು, ವೀಣಾಕುಮಾರಿ ಆಲೆಟ್ಟಿ, ಧನಂಜಯ ಕುಮಾರ್ ನೆಲ್ಲೂರು ಕೆಮ್ರಾಜೆ, ಕುಶಲ ಉದ್ದಂತಡ್ಕ ಮಂಡೆಕೋಲು, ತಿರುಮಲೇಶ್ವರಿ ಜಾಲ್ಸುರು, ನಮಿತಾ ರೈ ಬೆಳ್ಳಾರೆ, ಶಾರದಾ ಕನಕಮಜಲು, ಲೀಲಾವತಿ ಕುತ್ಯಾಡಿ ಐವರ್ನಾಡು, ಜಾನಕಿ ಕಂದಡ್ಕ ಅಮರಮುಡ್ನೂರು, ಬೇಬಿ ಕಲ್ತಡ್ಕ ಅಜ್ಜಾವರ, ಹಾಗೂ ಅರಂತೋಡು ಪಂಚಾಯತ್ ಅಭಿವ್ರದ್ಧಿ ಅಧಿಕಾರಿ ಜಯಪ್ರಕಾಶ್ ಮೊದಲಾದವರು ಭಾಗವಹಿಸಲಿದ್ದಾರೆ.


2015ರಲ್ಲಿ ಪ್ರಾರಂಭಗೊಂಡ ಟಿ.ಎಂ ಶಹೀದ್ ತೆಕ್ಕಿಲ್ ರವರ ಮಾಲಕತ್ವದ ತೆಕ್ಕಿಲ್ ಹೆಚ್.ಪಿ ಗ್ಯಾಸ್ ಏಜೆನ್ಸಿಯು ಗ್ರಾಮೀಣ ಪ್ರದೇಶವಾದ ಅರಂತೊಡು, ತೊಡಿಕಾನ ಸಂಪಾಜೆ ಚೆಂಬು ಮರ್ಕಂಜ, ಪೆರಾಜೆ ,ಆಲೆಟ್ಟಿ , ಅಜ್ಜಾವರ, ಜಾಲ್ಸೂರು ಕನಕಮಜಲು ಮತ್ತು ಬೆಳ್ಳಾರೆ ಈ ಭಾಗಗಳ ಗ್ರಾಹಕರಿಗೆ ಉತ್ತಮವಾದ ಸೇವೆಯನ್ನು ನೀಡುತ್ತಿದೆ. ನಮ್ಮ ಏಜೆನ್ಸಿ ವತಿಯಿಂದ ಈಗಾಗಲೇ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ, ಅರಣ್ಯ ಇಲಾಖೆ ವತಿಯಿಂದ ಎಸ್.ಸಿ.ಎಸ್.ಟಿಗಳಿಗೆ ಹಾಗು ಅನಿಲಭಾಗ್ಯ ಯೋಜನೆಯಡಿಯಲ್ಲಿ
ಬಿಪಿಎಲ್ ಪಡಿತರ ಚೀಟಿ ಹೊಂದಿದ ಅನೇಕ ಮಂದಿಗೆ ಉಚಿತ ಸಂಪರ್ಕವನ್ನು ನೀಡಲಾಗಿದೆ. ಗ್ಯಾಸ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ ಗ್ರಾಹಕರಿಗೆ ಕೂಡಲೆ ಸಂಪರ್ಕವನ್ನು ನೀಡಲಾಗುವುದು. ಸ್ವಚ್ಛ ಇಂದನ ಮತ್ತು ಉತ್ತಮ ಜೀವನವೇ ಸಂಸ್ಥೆಯ ಗುರಿಯಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಸಿಬ್ಬಂದಿಗಳಾದ ಧನುರಾಜ್ ಊರುಪಂಜ, ರಹಿಮ್ ಸುಳ್ಯ ‌ಇದ್ದರು.