ಸುಳ್ಯದ ಕೆ.ವಿ.ಜಿ.ಆಯುರ್ವೇದ ಮಹಾವಿದ್ಯಾಲಯದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ಇಂದು ಆಯುರ್ವೇದ ಕಾಲೇಜಿನ ಧನ್ವಂತರಿ ಸಭಾಂಗಣದಲ್ಲಿ ನಡೆಯಿತು.ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಯದ ಉಪಕುಲಪತಿ ಡಾ.ಎಂ.ಕೆ.ರಮೇಶ್ ಪದವಿ ಪ್ರದಾನ ಮಾಡಿದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ ಮೆಂಬರ್ ಡಾ. ಐಶ್ವರ್ಯ ಕೆ.ಸಿ.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಎ.ಒ.ಎಲ್.ಇ.ನ ಉಪಾಧ್ಯಕ್ಷೆ ಶೋಭಾ ಚಿದಾನಂದ, ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ .ಸಿ,ಕಾರ್ಯದರ್ಶಿ ಕೆ.ವಿ ಹೇಮನಾಥ,, ಕೋಶಾಧಿಕಾರಿ ಗೌತಮ್ ಗೌಡ ಎ.ಜಿ, ಹರ್ಷಿತಾ ಎಂ,ಡಾ. ಅಶೋಕ್, ಡಾ. ಪ್ರತಿಮಾ ಗುಪ್ತ, ಡಾ. ತಿರುಮಲೇಶ್ವರ ಭಟ್,ಡಾ. ವೇಣುಗೋಪಾಲ್, ಡಾ. ಹರ್ಷವರ್ಧನ್, ಡಾ.ಸನತ್, ಡಾ. ಭಾಗೇಶ್,ಡಾ. ಕವಿತಾ. ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ.ಸ್ವಾಗತಿಸಿದರು.
ಡಾ. ಲಕ್ಷ್ಮೀಶ್,ಡಾ. ಓ ಎಂ ಎಲಿಗಾರ್, ಲಕ್ಷ್ಮಿ ಸುರೇಶ್ ನಿರೂಪಿಸಿದರು.300ಕ್ಕೂ ಹೆಚ್ಚು ವೈದ್ಯರುಗಳಿಗೆ ಪದವಿ ಪ್ರದಾನ ಮಾಡಲಾಯಿತು .