ಸಮರ್ಪಕ ರೀತಿಯಲ್ಲಿ ತೇಪೆ ಕಾರ್ಯ ಮಾಡುವಂತೆ ಊರವರ ಒತ್ತಾಯ-ಅಧಿಕಾರಿಗಳ ಪರಿಶೀಲನೆಯ ಬಳಿಕ ಕೆಲಸ ಮುಂದುವರೆಸುವಂತೆ ಆಗ್ರಹ
ದೊಡ್ಡತೋಟ – ಮರ್ಕಂಜ ರಸ್ತೆಯ ದೊಡ್ಡತೋಟದಿಂದ ತೇಪೆ ಕಾರ್ಯ ಆರಂಭವಾಗಿದ್ದು, ತೇರ್ಪ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಕಳಪೆಯಾಗಿದೆ ಎಂದು ಊರವರು ಆರೋಪಿಸಿ, ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದ ಬಳಿಕ ಕಾಮಗಾರಿ ಮುಂದುವರೆಸಬೇಕೆಂದು ಆಗ್ರಹಿಸಿದ ಘಟನೆ ಇಂದು ಸಂಜೆ ವರದಿಯಾಗಿದೆ.
ದೊಡ್ಡತೋಟ – ಮರ್ಕಂಜ ರಸ್ತೆ ಬಹುತೇಕ ಹೊಂಡ ಗುಂಡಿಗಳಿಂದ ಕೂಡಿದ್ದು, ತೇಪೆ ಕಾರ್ಯ ಈಗಾಗಲೇ ನಡೆಯುತ್ತಿದೆ. ಆದರೆ ತೇಪೆ ಮಾಡುವಾಗ ದೊಡ್ಡ ಗುಂಡಿಗಳಿಗೆ ಮಾತ್ರ ತೇಪೆ ಮಾಡಲಾಗುತ್ತಿದೆ. ಸಣ್ಣ ಸಣ್ಣ ಗುಂಡಿಗಳನ್ನು ಹಾಗೆಯೇ ಬಿಡಲಾಗುತ್ತಿದೆ. ಹೀಗಾಗಿ ತೇರ್ಪೆಕಾರ್ಯ ಮಾಡುವಾಗಲೇ ಸಮರ್ಪಕ ರೀತಿಯಲ್ಲಿ ಮಾಡುವಂತೆ ಊರವರು ಆಗ್ರಹಿಸಿದ್ದಾರೆ.
ಈ ಬಗ್ಗೆ ಕಾಮಗಾರಿ ನಡೆಯುವ ಸ್ಥಳಕ್ಕೆ ತೆರಳಿ ಅಲ್ಲಿಂದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಊರವರು ಈ ಬಗ್ಗೆ ದೂರಿಕೊಂಡಿದ್ದಾರೆ.
“ರಸ್ತೆಗೆ ತೇಪೇ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಕಳೆಪೆಯೂ ಆಗಿದೆ. ಈ ಬಗ್ಗೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಬೇಕು
- ಪ್ರಮೋದ್ ಬೊಳ್ಳಾಜೆ ಸ್ಥಳೀಯರು
ರಸ್ತೆಯ ತೇಪೆ ಕಾರ್ಯ ಸಮಪರ್ಕವಾಗಿ ನಡೆಯಬೇಕು. ಈ ಬಗ್ಗೆ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ.
- ಪ್ರವೀಣ್ ಸ್ಥಳೀಯರು
ನಾವು ಮೈಂಟೆನ್ಸ್ ವಕ್ಸ್೯ ಮಾಡುತ್ತಿದ್ದೇವೆ.
ಅನುದಾನ ಕಡಿಮೆ ಇರುವ ಕಾರಣ ಅನುದಾನಕ್ಕೆ ತಕ್ಕಂತೆ ಮಾಡಲಾಗಿದೆ. ಊರವರ ದೂರಿನಂತೆ ನಾಳೆ ಸ್ಥಳ ಪರೀಶೀಲನೆಗೆ ನಡೆಸಲಾಗುವುದು.
- ಪರಮೇಶ್ವರ್, ಇಂಜಿನಿಯರ್ ಪಿಡಬ್ಲ್ಯುಡಿ, ಸುಳ್ಯ