ಸುಳ್ಯದ ಸೌಹಾರ್ದತೆ ಕೆಡಿಸಲು ಪ್ರಯತ್ನಿಸುವವರ ಮೇಲೆ ಕಾನೂನು ಕ್ರಮ ಆಗಲಿ
ನ.ಪಂ. ಸಭೆಯಲ್ಲಿ ಸದಸ್ಯರುಗಳಾದ ಕೆ.ಎಸ್.ಉಮ್ಮರ್, ಎಂ.ವೆಂಕಪ್ಪ ಗೌಡ, ಶರೀಫ್ ಕಂಠಿ ಆಗ್ರಹ
ಸುಳ್ಯದ ಮುಖ್ಯ ರಸ್ತೆಯಲ್ಲಿ ರಿಕ್ಷಾ ಚಾಲಕರು ಹಾಕಿರುವ ಬ್ಯಾನರ್‌ನ್ನು ಹರಿದವರ ಮೇಲೆ ಸೂಕ್ತ ಕಾನೂನು ಕ್ರಮ ಆಗಬೇಕು. ಈ ಕುರಿತು ನ.ಪಂ. ನಲ್ಲಿ ನಿರ್ಣಯ ಬರೆದು ಪೋಲೀಸ್ ಇಲಾಖೆಗೆ ಕಳುಹಿಸಬೇಕು ಎಂದು ನ.ಪಂ. ಸಭೆಯಲ್ಲಿ ಸದಸ್ಯರುಗಳಾದ ಕೆ.ಎಸ್. ಉಮ್ಮರ್, ಎಂ. ವೆಂಕಪ್ಪ ಗೌಡ ಹಾಗೂ ಶರೀಫ್ ಕಂಠಿ ಆಗ್ರಹಿಸಿದ್ದಾರೆ.
ಜ.೬ರಂದು ನಡೆದ ಸಭೆಯಲ್ಲಿ ಅವರು ಆಗ್ರಹಿಸಿದರು.
ವಿಷಯ ಪ್ರಸ್ತಾಪಿಸಿದ ಸದಸ್ಯ ಕೆ.ಎಸ್. ಉಮ್ಮರ್ ಬ್ಯಾನರ್ ಹರಿದಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಆಗಬೇಕು. ಊರಿನ ಸೌಹಾರ್ದತೆಗೆ ಧಕ್ಕೆ ತರುವವರನ್ನು ಸುಮ್ಮನೆ ಬಿಡಬಾರದು” ಎಂದು ಹೇಳಿದರೆ, ಸದಸ್ಯರುಗಳಾದ ಎಂ.ವೆಂಕಪ್ಪ ಗೌಡ ಹಾಗೂ ಶರೀಫ್ ಕಂಠಿಯವರು, ಶುಭಾಶಯ ಕಟೌಟ್ ಹರಿದಿರುವುದು ಸರಿಯಲ್ಲಿ. ಜಾತಿ – ಧರ್ಮ ನೋಡದೇ ನಿರ್ಧಾಕ್ಷಿಣ್ಯ ಕ್ರಮ ಆಗಲಿ ಎಂದು ಹೇಳಿದರು. ಅವರು ಮಾತಿಗೆ ಸಭೆಯಲ್ಲಿದ್ದ ಎಲ್ಲರೂ ಸಹಮತಿ ತೋರಿದರು.