ಅರಂತೋಡು: ಕೊಡಂಕೇರಿ ಸ್ವಾಮಿ ಕೊರಗಜ್ಜ ದೈವಸ್ಥಾನಕ್ಕೆ ಬೆಳ್ಳಿಯ ಮೂರ್ತಿ ಸಮರ್ಪಣೆ

0

ದುರ್ಗಾಮಾತಾ ಭಜನಾ ಮಂದಿರದಿಂದ ಕುಣಿತ ಭಜನೆಯೊಂದಿಗೆ ಸಾಗಿಬಂದ ಮೆರವಣಿಗೆ

ಅರಂತೋಡು ಗ್ರಾಮದ ಕೊಡಂಕೇರಿಯಲ್ಲಿ ವರ್ಷಂಪ್ರತಿ ಜರುಗುವ ಕಾಲಾವಧಿಯ ಹಾಗೂ ಹರಕೆಯ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವವು ಜ.26ರಿಂದ 29ರವರೆಗೆ ಜರುಗಲಿದ್ದು, ಸ್ವಾಮಿ ಕೊರಗಜ್ಜ ದೈವದ ಬೆಳ್ಳಿಯ ಮೂರ್ತಿಯ ಮೆರವಣಿಗೆಗೆ ಕುಣಿತ ಭಜನೆಯೊಂದಿಗೆ ಜ.26ರಂದು ಸಂಜೆ ಸನ್ನಿಧಿಗೆ ಮೆರವಣಿಗೆ ಮೂಲಕ ಸಾಗಿತು.

ಅರಂತೋಡಿನ ಶ್ರೀ ದುರ್ಗಾಮಾತ ಭಜನಾ ಮಂದಿರದಿಂದ ಸ್ವಾಮಿ ಕೊರಗಜ್ಜ ದೈವದ ಬೆಳ್ಳಿಯ ಮೂರ್ತಿಯನ್ನು ಕುಣಿತ ಭಜನೆಯ ಮೆರವಣಿಗೆತ ಮೂಲಕ ಸಾಗಿ ಕೊಡಂಕೇರಿ ಸನ್ನಿಧಿಯಲ್ಲಿ ಸಮರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸ್ವಾಮಿ ಕೊರಗಜ್ಜ ದೇವಸ್ಥಾನದ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.